ಬೆಂಗಳೂರು:ಕನ್ನಡ ಚಿತ್ರರಂಗಕ್ಕೆ ಅಪಾರ ನಷ್ಟವೆಂಬಂತೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನೆಲ್ಲ ಅಗಲಿದ್ದಾರೆ. ಆದರೆ, ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಅಪ್ಪುವಿನ ಕಣ್ಣುಗಳನ್ನು ನಗರದ ನಾರಾಯಣ ನೇತ್ರಾಯಲಕ್ಕೆ ದಾನ ಕುಟುಂಬಸ್ಥರ ಅನುಮತಿ ಮೇರೆಗೆ ಅಪ್ಪುವಿನ ಕಣ್ಣುಗಳನ್ನು ನಗರದ ನಾರಾಯಣ ನೇತ್ರಾಯಲಕ್ಕೆ ದಾನ ಮಾಡಲಾಗಿದ್ದು, ಮತ್ತೊಬ್ಬರ ಬಾಳಿಗೆ ಬೆಳಕಾಗಲಿದ್ದಾರೆ.
ಇದನ್ನೂ ಓದಿ: ಇವ್ರಂತೆ ಡ್ಯಾನ್ಸ್, ಫೈಟ್ ಮಾಡ್ಬೇಕು, ಕಲಿಬೇಕು ಅಂತಾ ಭಾಳ್ ಆಸೆ ಇತ್ತು.. ಅಪ್ಪು ಕುರಿತು ಯಶ್ ಮಾತು
ಪುನೀತ್, ತಂದೆ ವರನಟ ಡಾ.ರಾಜ್‌ಕುಮಾರ್ ಕೂಡ ನೇತ್ರದಾನ ಮಾಡಿ ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದರು. ಇದೀಗ ಅಪ್ಪನ ಹಾದಿಯನ್ನೇ ಮಗ ತುಳಿದಿದ್ದಾರೆ. ಇನ್ನು ನೆಚ್ಚಿನ ನಟನ ಅಂತಿಮ ದರ್ಶನಕ್ಕೆ ಅಭಿಮಾನಿಗಳಿಗಾಗಿ ಕಂಠೀರವ ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಗಿದೆ.