ಕರ್ನಾಟಕ

karnataka

ETV Bharat / sitara

ಬರ್ತಿದೆ.. ಪುರ್ ಸೊತ್ತೇ ಇಲ್ಲದವರ ಪುಕ್ಸಟ್ಟೆ ಲೈಫು..!! - ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್

ಪುಕ್ಸಟ್ಟೆ ಲೈಫು ಫುಲ್​​ ಕಾಮಿಡಿ ಸಿನಿಮಾ. ಇನ್ನು ಪೋಸ್ಟರ್​​​ನಿಂದಲೇ ಸಾಕಷ್ಟು ಕುತೂಹಲ ಹುಟ್ಟಿಸಿರೋ ಈ ಚಿತ್ರದಲ್ಲಿ  ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ , ಅಚ್ಯುತ್ ಕುಮಾರ್, ರಂಗಾಯಣ ರಘು, ಮಾತಂಗಿ ಪ್ರಸನ್ನ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬರ್ತಿದೆ.. ಪುರ್ ಸೊತ್ತೇ ಇಲ್ಲದವರ ಪುಕ್ಸಟ್ಟೆ ಲೈಫು.

By

Published : Aug 22, 2019, 8:01 PM IST

ಇತ್ತೀಚಿಗಂತೂ ಹೊಸಬರ ಜೊತೆಗೆ ವೆರೈಟಿ ಸಿನಿಮಾ ಟೈಟಲ್​​ಗಳು ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೇ ಸೌಂಡ್ ಮಾಡ್ತಿವೆ. ಇದೀಗ ಪುಕ್ಸಟ್ಟೆ ಲೈಫು, ಪುರ್ ಸೊತ್ತೇ ಇಲ್ಲಾ ಎಂಬ ಟ್ಯಾಗ್ ಲೈನ್ ಹೊಂದಿರುವ ಚಿತ್ರವೊಂದು ಈ ಸಾಲಿನಲ್ಲಿ ನಲಿದಾಡುತ್ತಿದೆ.

ಈ ಟೈಟಲ್ಲೇ ಹೇಳೋ ಹಾಗೆ ಇದು ಫುಲ್​​ ಕಾಮಿಡಿ ಸಿನಿಮಾ. 100 ಪರ್ಸೆಂಟ್ ನಗಿಸೋ ಕಥೆ. ಇನ್ನು ಪೋಸ್ಟರ್​​​ನಿಂದಲೇ ಸಾಕಷ್ಟು ಕುತೂಹಲ ಹುಟ್ಟಿಸಿರೋ ಈ ಚಿತ್ರದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ , ಅಚ್ಯುತ್ ಕುಮಾರ್, ರಂಗಾಯಣ ರಘು, ಮಾತಂಗಿ ಪ್ರಸನ್ನ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಾಗರಾಜ್ ಸೌಮ್ಯಾಜೀ ನಿರ್ಮಾಣದಲ್ಲಿ ತಯಾರಾಗ್ತಿರೋ ಈ ಚಿತ್ರಕ್ಕೆ, ಅರವಿಂದ್ ಕುಪ್ಳಿಕರ್ ಆಕ್ಷನ್ ಕಟ್ ಹೇಳಿದ್ದಾರೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮಾಡಿದ್ದು, ವಾಸು ದೀಕ್ಷಿತ್ ಸಂಗೀತ ಸಂಯೋಜಿಸಿದ್ದಾದೆ.

ಸದ್ಯ ಪುಕ್ಸಟೆ ಲೈಫು ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೊನೆಯ ಹಂತದಲ್ಲಿದ್ದು, ಸದ್ಯದಲ್ಲೇ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡೋ ಪ್ಲಾನ್ ನಲ್ಲಿದೆ..

ABOUT THE AUTHOR

...view details