ಕ್ಲಾಸ್ ಅಂಡ್ ಮಾಸ್ ಸಿನಿಮಾಗಳಲ್ಲಿ ಮಿಂಚಿದ್ದ ಸ್ಯಾಂಡಲ್ವುಡ್ ದಾಸ ಇದೀಗ ಮತ್ತೊಮ್ಮೆ ಫ್ಯಾಮಿಲಿ ಸೆಂಟಿಮೆಂಟ್ ಕಥೆಯ ಮೂಲಕ ಬರಲು ತಯಾರಾಗ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಒಡೆಯ’ನಾಗಿ ಪರದೆ ಮೇಲೆ ಮಿಂಚಲಿದ್ದಾರೆ.
ಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ಕೊಟ್ಟ ಸ್ಯಾಂಡಲ್ವುಡ್ ‘ಒಡೆಯ’.! - ದಚ್ಚು ಅಭಿಮಾನಿ
ಒಡೆಯನ ಲುಕ್ ನೋಡಲು ದಚ್ಚು ಅಭಿಮಾನಿಗಳೆಲ್ಲ ಕಾತುರರಾಗಿದ್ದರು. ಇದೀಗ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ.
ಎಂ ಡಿ ಶ್ರೀಧರ್ ಹಾಗೂ ದರ್ಶನ್ ಜೋಡಿಯ ಒಡೆಯಾ ಸಿನಿಮಾ ಆರಂಭದಿಂದಲೂ ಸಖತ್ ಕ್ರೇಜ್ ಕ್ರಿಯೇಟ್ ಮಾಡಿತ್ತು. ಒಡೆಯನ ಲುಕ್ ನೋಡಲು ದಚ್ಚು ಅಭಿಮಾನಿಗಳೆಲ್ಲ ಕಾತುರರಾಗಿದ್ದರು. ಇದೀಗ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ.
ಬ್ಲ್ಯಾಕ್ ಶರ್ಟ್ ಧರಿಸಿ, ಸನ್ಗ್ಲಾಸ್ ಹಾಕಿ ಖದರ್ ಆಗಿ ಕಾಣಿಸಿಕೊಂಡಿರುವ ದರ್ಶನ್ ಲುಕ್ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಿದೆ. ಗಣೇಶ ಚತುರ್ಥಿ ಪ್ರಯುಕ್ತ ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮೆಲ್ಲಾ ಕನಸುಗಳು ಈಡೇರಲಿ, ಆ ದೇವರ ಆಶೀರ್ವಾದ ಸದಾ ನಿಮ್ಮ ಕುಟುಂಬಗಳ ಮೇಲಿರಲಿ ಎಂದು ದರ್ಶನ್ ಟ್ವಿಟರ್‌ನಲ್ಲಿ ಶುಭಕೋರಿದ್ದಾರೆ.