ಕರ್ನಾಟಕ

karnataka

By

Published : Jun 16, 2019, 9:59 PM IST

Updated : Jun 16, 2019, 10:13 PM IST

ETV Bharat / sitara

ನೈಜ ಘಟನೆಗಳ ಸಿನಿಮಾ 'ನ್ಯೂರಾನ್' ಟ್ರೇಲರ್​ ಬಿಡುಗಡೆ

ವಿಕಾಸ್ ಪುಷ್ಪಗಿರಿ ನಿರ್ದೇಶನದ ಸೈಂಟಿಫಿಕ್ ಥ್ರಿಲ್ಲರ್ ಸಿನಿಮಾ 'ನ್ಯೂರಾನ್' ಟ್ರೇಲರ್​​ ಬಿಡುಗಡೆಯಾಗಿದ್ದು, ಸಿನಿಮಾ ಶೀಘ್ರವೇ ತೆರೆ ಕಾಣಲಿದೆ. ಈ ಚಿತ್ರದ ಮೂಲಕ ನಾಯಕ 'ಯುವ' ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

'ನ್ಯೂರಾನ್'

ಸೈಂಟಿಫಿಕ್ ಥ್ರಿಲ್ಲರ್ ಸಿನಿಮಾ 'ನ್ಯೂರಾನ್' ಟ್ರೇಲರ್​​ ಬಿಡುಗಡೆಯಾಗಿದೆ. ನಿರ್ದೇಶಕ ವಿಕಾಸ್​​​ ಪುಷ್ಪಗಿರಿ ಸಾಕಷ್ಟು ಅಧ್ಯಯನ ಮಾಡಿ ಈ ಸಿನಿಮಾ ನಿರ್ದೇಶನಕ್ಕೆ ಧುಮುಕಿದ್ದಾರೆ. ನಿಜಜೀವನದ ಕೆಲವೊಂದು ಘಟನೆಗಳನ್ನು ಮುಂದಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ.

'ನ್ಯೂರಾನ್' ಎಂದರೆ ‘ನರ ಕೋಶ’. ಮನುಷ್ಯರಲ್ಲಿ ಈ ‘ನರ ಕೋಶ’ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಇದೇ ವಿಚಾರವನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ ಎಂದು ನಿರ್ದೇಶಕ ವಿಕಾಸ್ ಹೇಳುತ್ತಾರೆ. ಸಿನಿಮಾ ಚಿತ್ರೀಕರಣ ಪೂರೈಸಿ ಈಗ ಟ್ರೇಲರ್ ಕೂಡಾ ಬಿಡುಗಡೆ ಆಗಿದೆ. 45 ದಿನಗಳ ಕಾಲ ಬೆಂಗಳೂರು ಹಾಗೂ ಸಕಲೇಶಪುರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಐವರು ಜೊತೆಗೂಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಈ ಸಿನಿಮಾದ ಮೂಲಕ ನಾಯಕ 'ಯುವ' ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಸುಮಾರು 3 ವರ್ಷಗಳ ಹಿಂದೆಯೇ ಈ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಸಿನಿಮಾ ಆರಂಭಕ್ಕೂ ಮುನ್ನ ಅದಕ್ಕಾಗಿ 6 ತಿಂಗಳ ಕಾಲ ನಟರಿಗೆ, ತಂತ್ರಜ್ಞರಿಗೆ ತರಬೇತಿ ನೀಡಲಾಗಿದೆಯಂತೆ. ಇದರಲ್ಲಿ ನೇಹಾ ಪಾಟೀಲ್ ಸಾಮಾಜಿಕ ಕಾರ್ಯಕರ್ತೆ ಆಗಿ ನಟಿಸಿದ್ದಾರೆ. ಇವರೊಂದಿಗೆ ಕಿರುತೆರೆಯ ಶಿಲ್ಪಾ, ವೈಷ್ಣವಿ ಚಂದ್ರನ್ ಮೆನನ್ ಹಾಗೂ ಇನ್ನಿತರರು ಬಣ್ಣ ಹಚ್ಚಿದ್ದಾರೆ.

Last Updated : Jun 16, 2019, 10:13 PM IST

For All Latest Updates

TAGGED:

ABOUT THE AUTHOR

...view details