ಭೀಕರ ಮಳೆಗೆ ತತ್ತರಿಸಿರುವ ಉತ್ತರ ಕರ್ನಾಟಕದ ನೆರವಿಗೆ ಈಗಾಗಲೇ ಅನೇಕ ಸಂಘ ಸಂಸ್ಥೆಗಳು, ರಾಜ್ಯದ ಜನರು, ಜೊತೆಗೆ ಕನ್ನಡ ಚಿತ್ರರಂಗ ಕೂಡಾ ಸ್ಪಂದಿಸಿದೆ. ಸುದೀಪ್, ಪುನೀತ್ ರಾಜ್ಕುಮಾರ್, ದುನಿಯಾ ವಿಜಯ್, ಹರ್ಷಿಕಾ ಪೂಣಚ್ಚ ಹಾಗೂ ಇನ್ನಿತರರು ಸಹಾಯ ಮಾಡಿದ್ದಾರೆ. ಅಲ್ಲದೆ ಅಭಿಮಾನಿಗಳಿಗೆ ಕೂಡಾ ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಮನವಿ ಮಾಡಿದ್ದಾರೆ.
ನೆರೆಪೀಡಿತ ಸ್ಥಳಗಳಿಗೆ ತೆರಳಿ ಜನರಿಗೆ ಅವಶ್ಯಕ ವಸ್ತುಗಳನ್ನು ತಲುಪಿಸಿದ ನೀನಾಸಂ ಸತೀಶ್ - ಭೀಕರ ಪ್ರವಾಹ
ಜನಸಾಮಾನ್ಯರು ಹಾಗೂ ಸಾಕಷ್ಟು ಸೆಲಬ್ರಿಟಿಗಳು ನೆರೆಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದು ನಟ ನೀನಾಸಂ ಸತೀಶ್ ತಾವೇ ಸ್ವತ: ನೆರೆಪೀಡಿತ ಹಳ್ಳಿಗಳಿಗೆ ತೆರಳಿ ಜನರಿಗೆ ಬೇಕಾದ ವಸ್ತುಗಳನ್ನು ವಿತರಸುತ್ತಿದ್ದಾರೆ. ಗದಗ ಜಿಲ್ಲೆಯ ಹೊಳೆ ಹೊನ್ನೂರಿಗೆ ತೆರಳಿ ಜನರಿಗೆ ಅಗತ್ಯ ಸಾಮಾಗ್ರಿ ಒದಗಿಸಿ ಧೈರ್ಯ ತುಂಬಿದ್ದಾರೆ.
ನೀನಾಸಂ ಸತೀಶ್ ಕೂಡಾ ಇದೀಗ ನೆರೆಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ಸತೀಶ್ ಒಂದು ಹೆಜ್ಜೆ ಮುಂದೆ ಹೋಗಿ ಅವರೇ ಸ್ವತ: ಗದಗ ಜಿಲ್ಲೆ ಹೊಳೆ ಹೊನ್ನೂರು ಗ್ರಾಮಕ್ಕೆ ತೆರಳಿ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ್ದಾರೆ. ಅಲ್ಲದೆ ನೆರೆಪೀಡಿತರಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡುವ ಮುಖಾಂತರ ಹೊಳೆ ಹೊನ್ನೂರು ಗ್ರಾಮದ ಜನರಿಗೆ ಧೈರ್ಯ ತುಂಬಿದ್ದಾರೆ. ಸರ್ಕಾರದ ವತಿಯಿಂದ ಸಂತ್ರಸ್ತರಿಗೆ ಇನ್ನೂ ಯಾವುದೇ ನೆರವು ಸಿಕ್ಕಿಲ್ಲ, ಭೀಕರ ಪ್ರವಾಹಕ್ಕೆ ಅಲ್ಲಿ ಜನರು ತತ್ತರಿಸಿ ಹೋಗಿದ್ದಾರೆ. ಸದ್ಯ ಅವರಿಗೆ ನಮ್ಮ ನಿಮ್ಮೆಲ್ಲರ ನೆರವು ಅಗತ್ಯವಿದೆ, ದಯವಿಟ್ಟು ಸಂತ್ರಸ್ತರ ನೆರವಿಗೆ ಧಾವಿಸಿ ಎಂದು ನೀನಾಸಂ ಸತೀಶ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಸತೀಶ್ ಮಂಡ್ಯ ಜಿಲ್ಲೆಯ ಹಳ್ಳಿಯೊಂದನ್ನು ದತ್ತು ಪಡೆದಿದ್ದರು. ಒಟ್ಟಿನಲ್ಲಿ 'ಅಯೋಗ್ಯ' ಯೋಗ್ಯ ಕೆಲಸ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.