ಕರ್ನಾಟಕ

karnataka

ETV Bharat / sitara

ಅಜಯ್ ರಾವ್ 'ಲವ್ ಯು ರಚ್ಚು' ಚಿತ್ರಕ್ಕೆ ಆ್ಯಕ್ಷನ್ ಪ್ರಿನ್ಸ್ ಸಪೋರ್ಟ್ - Dhruva Sarja release love you rachchu triler

Love You ರಚ್ಚು: ಹಾಡಿನಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೇ ಸೌಂಡ್ ಮಾಡುತ್ತಿರುವ ಲವ್ ಯು ರಚ್ಚು ಸಿನಿಮಾಗೆ ಬರ್ಜರಿ ಹುಡುಗ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಬೆಂಬಲ ನೀಡಿದ್ದಾರೆ. ಇದೇ 16 ರಂದು ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ.

Love_You_Rachchu
ಲವ್​ ಯು ರಚ್ಚು

By

Published : Dec 14, 2021, 7:01 AM IST

ಟೈಟಲ್ ಹಾಗು ಹಾಡುಗಳಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಸಿನಿಮಾ ಲವ್​ ಯು ರಚ್ಚು. ಇದೇ ಮೊದಲ ಬಾರಿಗೆ ಅಜಯ್ ರಾವ್ ಹಾಗು ಡಿಂಪಲ್ ಕ್ವೀನ್​ ರಚಿತಾ ರಾಮ್ ಒಟ್ಟಾಗಿ ಅಭಿನಯಿಸಿದ್ದು ಇಬ್ಬರನ್ನು ತೆರೆಮೇಲೆ ನೋಡಲು ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಈಗಾಗ್ಲೇ ಮುದ್ದು ನೀನು ಹಾಡಿನಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೇ ಸೌಂಡ್ ಮಾಡುತ್ತಿರುವ ಲವ್ ಯು ರಚ್ಚು ಸಿನಿಮಾಗೆ, ಇದೀಗ ಆಂಜನೇಯನ ಭಕ್ತನ ಸಾಥ್ ಸಿಕ್ಕಿದೆ.

ಅಜಯ್ ರಾವ್ 'ಲವ್ ಯು ರಚ್ಚು' ಚಿತ್ರಕ್ಕೆ ಆ್ಯಕ್ಷನ್ ಪ್ರಿನ್ಸ್ ಸಪೋರ್ಟ್

ಹೌದು.. ಪೊಗರು ಹುಡುಗ ಧ್ರುವ ಸರ್ಜಾ ಲವ್ ಯು ರಚ್ಚು ಸಿನಿಮಾ ಟ್ರೈಲರ್​ನ್ನ ಲಾಂಚ್ ಮಾಡಲಿದ್ದಾರೆ. ಅಜಯ್ ರಾವ್ ಗೆಳತನಕ್ಕೆ ಹಾಗು ಈ ಸಿನಿಮಾದ, ಕ್ರಿಯೇಟಿವ್ ಹೆಡ್ ಹಾಗು ನಿರ್ಮಾಪಕರಾಗಿರೋ ಗುರು ದೇಶಪಾಂಡೆ ಸ್ನೇಹಕ್ಕಾಗಿ ಧ್ರುವ ಇದೇ 16ರಂದು ಚಿತ್ರದ ಟ್ರೈಲರನ್ನು ಬಿಡುಗಡೆ ಮಾಡಲಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಲವ್ ಯು ರಚ್ಚು ಸಿನಿಮಾದ ಓಯ್ ಡಿಂಪಲ್ ಡಿಂಪಲ್ ಹುಡುಗಿ, ನಿನ್ನ ಡಾರ್ಲಿಂಗ್ ಅನ್ಬೋದಾ.. ನಾ ಸೈಕಲ್ ಗ್ಯಾಪಲ್ಲಿ ಡೈಲಿ ಬಂದು ಲೈನ್ ಹಾಕ್ಬೋದಾ.. ಎಂಬ ಹಾಡು ಬಿಡುಗಡೆ ಆಗಿ, ಸಿನಿ ಪ್ರಿಯರಿಂದ ಸಖತ್ ಮೆಚ್ಚುಗೆ ಪಡೆದಿದೆ. ನಿರ್ದೇಶಕ ಹಾಗು ಗೀತ ರಚನೆಕಾರ ಚೇತನ್ ಕುಮಾರ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ನವೀನ್ ಸಜ್ಜು ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿದೆ. ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಕ್ಯಾಚೀ ಟ್ಯೂನ್ ಹಾಕಿದ್ದಾರೆ.

ಚಿತ್ರದ ಟೈಟಲ್ ಹೇಳುವ ಹಾಗೆ ಇದೊಂದು ಮುದ್ದಾದ ರೊಮ್ಯಾಂಟಿಕ್ ಕಥಾ ಹಂದರ ಒಳಗೊಂಡಿರುವ ಸಿನಿಮಾವಾಗಿದೆ. ಚಿತ್ರಕ್ಕೆ ನಿರ್ದೇಶಕ ಗುರು ದೇಶಪಾಂಡೆ ಬಂಡವಾಳ ಹೂಡಿದ್ದಾರೆ. ನಿರ್ದೇಶಕ ಶಶಾಂಕ್ ಕಥೆಯನ್ನು ಬರೆದಿದ್ದು, ಯುವ ನಿರ್ದೇಶಕ ಶಂಕರ್ ರಾಜ್ ಆ್ಯಕ್ಷನ್ ಕಟ್​ ಹೇಳಿದ್ದಾರೆ. ಚಿತ್ರದ ಪೋಸ್ಟರ್ ಮತ್ತು ಹಾಡುಗಳಿಂದ ಅಜಯ್ ರಾವ್- ರಚಿತಾ ರಾಮ್ ಜೋಡಿ ವರ್ಕ್ ಔಟ್ ಆಗಿದ್ದು, ಸ್ಯಾಂಡಲ್ ವುಡ್​ನಲ್ಲಿ ಹಿಟ್ ಆಗುವ ಸೂಚನೆ ಸಿಗುತ್ತಿದೆ.

ಇದೇ ತಿಂಗಳು 16ರಂದು ಲವ್ ಯು ರಚ್ಚು ಸಿನಿಮಾ ಟ್ರೈಲರ್ ಬಿಡುಗಡೆ ಆಗುತ್ತಿದ್ದು, 31ರಂದು ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗಲಿದೆ.

ABOUT THE AUTHOR

...view details