ಕರ್ನಾಟಕ

karnataka

ETV Bharat / sitara

'ನೀ ಸಿಗೋವರೆಗೂ' ಚಿತ್ರದ ಹ್ಯಾಟ್ರಿಕ್ ಹೀರೋ ಫಸ್ಟ್​ ಲುಕ್​ ಅನಾವರಣ - shivarajkumar latest news

ಹ್ಯಾಟ್ರಿಕ್ ಹೀರೋ ನೀ ಸಿಗೋವರೆಗೂ ಚಿತ್ರದಲ್ಲಿ ಸೇನಾ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿವೀಲ್ ಆಗಿರೋ ಲುಕ್ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸಖತ್ ಥ್ರಿಲ್ ನೀಡಿದೆ.

launch of shivarajkumar s Nee sigoovaregu films first look
launch of shivarajkumar s Nee sigoovaregu films first look

By

Published : Oct 15, 2021, 9:59 PM IST

ಕನ್ನಡ ಚಿತ್ರರಂಗದಲ್ಲಿನ ಕರುನಾಡ ಚಕ್ರವರ್ತಿ ನಟ‌ ಶಿವರಾಜ್ ಕುಮಾರ್ ಸದ್ಯ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳನ್ನ ಮಾಡ್ತಾ ಇದ್ದಾರೆ. ಇದೀಗ ವಿಜಯದಶಮಿ ಹಬ್ಬದ ಪ್ರಯುಕ್ತ 'ನೀ ಸಿಗೋವರೆಗೂ' ಚಿತ್ರದಲ್ಲಿನ ಶಿವರಾಜ್ ಕುಮಾರ್ ಪಾತ್ರದ ಲುಕ್ ಅನಾವರಣ ಮಾಡಲಾಗಿದೆ‌.

ಹ್ಯಾಟ್ರಿಕ್ ಹೀರೋ ಈ ಚಿತ್ರದಲ್ಲಿ ಸೇನಾ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿವೀಲ್ ಆಗಿರೋ ಲುಕ್ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸಖತ್ ಥ್ರಿಲ್ ನೀಡಿದೆ.

'ನೀ ಸಿಗೋವರೆಗೂ' ಚಿತ್ರದ ಹ್ಯಾಟ್ರಿಕ್ ಹೀರೋ ಫಸ್ಟ್​ ಲುಕ್​ ಅನಾವರಣ

ಭಾವನಾತ್ಮಕ ಪ್ರೇಮ ಸಕಥಾಹಂದರದ ಈ ಚಿತ್ರವನ್ನ ಟಾಲಿವುಡ್ ನಿರ್ದೇಶಕ ರಾಮ್ ಧೂಲಿಪುಡಿ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಸೆಂಚುರಿ ಸ್ಟಾರ್​ಗೆ ಜೋಡಿಯಾಗಿ ಮೆರ್ಹಿನ್ ಫಿರ್ಜಾದ ನಟಿಸುತ್ತಿದ್ದಾರೆ. ನಾಜರ್, ಸಾಧುಕೋಕಿಲ, ಸಂಪತ್ ಕುಮಾರ್, ಮಂಗ್ಲಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಟಗರು ಖ್ಯಾತಿಯ ಚರಣ್ ರಾಜ್ ಸಂಗೀತ ನಿರ್ದೇಶನ, ಮಹೇಂದ್ರ ಸಿಂಹ ಛಾಯಾಗ್ರಹಣ, ದೀಪು ಸಂಕಲನ ಹಾಗೂ ರವಿ ಸಂತೆಹಕ್ಲು ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಬಾಲ ಶ್ರೀರಾಮ್ ಸ್ಟುಡಿಯೋಸ್ ಲಾಂಛನದಲ್ಲಿ ನರಾಲ ಶ್ರೀನಿವಾಸ್ ರೆಡ್ಡಿ, ಶ್ರೀಕಾಂತ್ ಧೂಲಿಪುಡಿ ಹಾಗೂ ಸ್ವಾತಿ ವನಪಲ್ಲಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

'ನೀ ಸಿಗೋವರೆಗೂ' ಚಿತ್ರದ ಹ್ಯಾಟ್ರಿಕ್ ಹೀರೋ ಫಸ್ಟ್​ ಲುಕ್​ ಅನಾವರಣ

ಕುಡಿಪುಡಿ ವಿಜಯ್ ಕುಮಾರ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ನೀ ಸಿಗೋವರೆಗೂ ಚಿತ್ರ ನಿರ್ಮಾಣವಾಗಲಿದೆ. ಸದ್ಯ ನೀ ಸಿಗೋವರೆಗೂ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ದ್ವಿತೀಯ ಹಂತದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ಬೆಂಗಳೂರು, ಚಿಕ್ಕಮಗಳೂರು, ಜಮ್ಮು&ಕಾಶ್ಮೀರ ಹಾಗೂ ಯು ಎಸ್ ಮುಂತಾದ ಕಡೆ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ABOUT THE AUTHOR

...view details