ಕರ್ನಾಟಕ

karnataka

ETV Bharat / sitara

ಇಂದು 'ಕೋಟಿಗೊಬ್ಬ 3' ರಿಲೀಸ್ ಆಗೋದು ಅನುಮಾನ: ಕಿಚ್ಚನ ಅಭಿಮಾನಿಗಳಿಗೆ ನಿರಾಸೆ - ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್

ತಾಂತ್ರಿಕ ದೋಷದಿಂದ ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ 'ಕೋಟಿಗೊಬ್ಬ 3' ಸಿನಿಮಾ ಬಿಡುಗಡೆ ಆಗುವುದು ಅನುಮಾನ ಎನ್ನಲಾಗುತ್ತಿದೆ. ಈಗಾಗಲೇ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ನಿಗದಿಯಾಗಿದ್ದ ಶೋ ರದ್ದಾಗಿದೆ. ಇತ್ತ ನಿರ್ಮಾಪಕ ಸೂರಪ್ಪ ಬಾಬು ಅವರು ಸಹ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.

kotigobba-3-film-show-canceled
ಕೋಟಿಗೊಬ್ಬ 3

By

Published : Oct 14, 2021, 11:29 AM IST

Updated : Oct 14, 2021, 12:58 PM IST

ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಕೋಟಿಗೊಬ್ಬ 3' ರಾಜ್ಯಾದ್ಯಂತ ಇಂದು ಬಿಡುಗಡೆ ಆಗಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಬಿಡುಗಡೆ ಆಗೋದು ಡೌಟ್‌ ಎನ್ನಲಾಗುತ್ತಿದೆ.

ಈಗಾಗಲೇ ಕಿಚ್ಚನ ಅಭಿಮಾನಿಗಳು ಮಾಗಡಿ ರಸ್ತೆಯರೋ ಪ್ರಸನ್ನ ಚಿತ್ರಮಂದಿರದಲ್ಲಿ ಬೆಳಗ್ಗೆ 7 ಗಂಟೆಗೆ ಫ್ಯಾನ್ಸ್‌ ಸ್ಪೆಷಲ್ ಶೋ ಹಮ್ಮಿಕೊಂಡಿದ್ದರು‌. ಆದರೆ ಈ ಶೋ ದಿಢೀರ್ ರದ್ದಾಗಿದೆ‌.

ಇಂದು 'ಕೋಟಿಗೊಬ್ಬ 3' ರಿಲೀಸ್ ಆಗೋದು ಅನುಮಾನ

ನಿನ್ನೆ 7 ಗಂಟೆಗೆ ಈ ಪ್ರದರ್ಶನದ ಎಲ್ಲಾ ಟಿಕೆಟ್​​ಗಳು ಸೋಲ್ಡ್ ಔಟ್ ಆಗಿದ್ದವು. ಈ ಮೂಲಕ ಸಿನಿಮಾ ನೋಡಲು ಚಿತ್ರಮಂದಿರದ ಬಳಿ ಸೇರಿರುವ ಕಿಚ್ಚನ ಅಪಾರ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ‌. ಇನ್ನು ಪ್ರಸನ್ನ ಚಿತ್ರಮಂದಿರದವರು ಶೋ ಕ್ಯಾನ್ಸಲ್ ಅಂದ ಕಾರಣ, ಚಿತ್ರಮಂದಿರದ ನೂರಾರು ಅಭಿಮಾನಿಗಳು ಒಳಗೆ ನುಗ್ಗುವ ಪ್ರಯತ್ನ ಮಾಡಿದ್ದಾರೆ‌. ಸದ್ಯ ಪೊಲೀಸರ ಸಹಾಯದಿಂದ ಚಿತ್ರಮಂದಿರದಿಂದ ಪ್ರೇಕ್ಷಕರನ್ನು ಹೊರಗಡೆ ಕಳುಹಿಸುವ ಕೆಲಸ ನಡೆಯುತ್ತಿದೆ.

ಕೋಟಿಗೊಬ್ಬ 3 ಸಿನಿಮಾ ಇಂದು ರಿಲೀಸ್ ಆಗುತ್ತಾ?, ಇಲ್ವಾ? ಅನ್ನೋ ಗೊಂದಲದಲ್ಲಿ ಸುದೀಪ್‌ ಅಭಿಮಾನಿಗಳು ಇದ್ದಾರೆ. ಯಾಕೆಂದರೆ, ತಾಂತ್ರಿಕ ಸಮಸ್ಯೆಯಿಂದ ರಾಜ್ಯಾದ್ಯಂತ ಇಂದಿನ ಎಲ್ಲಾ ಫ್ಯಾನ್ಸ್ ಶೋ ಕ್ಯಾನ್ಸಲ್ ಆಗುವ ಸಾಧ್ಯತೆ ದಟ್ಟವಾಗಿದೆ. ಬೆಂಗಳೂರಿನ ಕೆ.ಜಿ.ರಸ್ತೆಯಲ್ಲಿರೋ ಭೂಮಿಕಾ ಚಿತ್ರಮಂದಿರದಲ್ಲಿನ ಶೋ ಸಹ ರದ್ದಾಗುವ ಸೂಚನೆ ಕಾಣಿಸಿದೆ.

ಸಂಪರ್ಕಕ್ಕೆ ಸಿಗದ ಚಿತ್ರ ನಿರ್ಮಾಪಕ

ಇದುವರೆಗೂ ಚಿತ್ರಮಂದಿರದವರ ಸಂಪರ್ಕಕ್ಕೆ ನಿರ್ಮಾಪಕ ಸೂರಪ್ಪ ಬಾಬು ಸಿಕ್ಕಿಲ್ಲ. ಮಾಹಿತಿ ಪ್ರಕಾರ ಸೂರಪ್ಪ ಬಾಬು ನಿನ್ನೆ ರಾತ್ರಿಯೇ ಹೈದರಾಬಾದ್‌ಗೆ ಹೋಗಿದ್ದಾರೆ. ಆದರೆ ಇಂದು ರಾಜ್ಯಾದ್ಯಂತ ಕೋಟಿಗೊಬ್ಬ ರಿಲೀಸ್ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಆದ್ರೆ ಥಿಯೇಟರ್‌ಗಳ ಮುಂದೆ ಕಿಚ್ಚನ ನೋಡಲು ಅಪಾರ ಅಭಿಮಾನಿಗಳು ಕಾಯುತ್ತಿದ್ದಾರೆ.

Last Updated : Oct 14, 2021, 12:58 PM IST

ABOUT THE AUTHOR

...view details