ಜುಲೈ 7 ರಂದು ಕ್ರಿಕೆಟ್ ಲೋಕದ ದಿಗ್ಗಜ ಮಹೇಂದ್ರ ಸಿಂಗ್ ಧೋನಿಯವರ ಹುಟ್ಟುಹಬ್ಬ. 40ನೇ ವರ್ಷಕ್ಕೆ ಕಾಲಿಡಲಿರುವ ಸಂದರ್ಭದಲ್ಲಿ ಸ್ಯಾಂಡಲ್ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕಾಮನ್ ಡಿಪಿ (ಸಿಡಿಪಿ) ಅನಾವರಣ ಮಾಡಿದ್ದಾರೆ.
"ಮಾಹಿ ಎಲ್ಲರ ಹೀರೋ".. ಇದು ಧೋನಿ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿ ಬಿಡುಗಡೆ ಮಾಡಿದ ಕಿಚ್ಚನ ನುಡಿ - Team India
ಇವರು ಎಲ್ಲರ ಹೀರೋ. ಇವರು ಎಲ್ಲರ ಫೆವರೇಟ್, ಇವರು ಎಲ್ಲರ ಸ್ಟಾರ್, ಇವರು ಎಲ್ಲರ ಸ್ಫೂರ್ತಿ. ಎಂಎಸ್ ಧೋನಿ ಅವರ ಕಾಮನ್ ಡಿಪಿ ಅನಾವರಣ ಮಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ. ನಟನಾಗಿ ಅಲ್ಲ, ಓರ್ವ ಫ್ಯಾನ್ ಆಗಿ. ನಿಮಗೆ ಜನ್ಮದಿನದ ಶುಭಾಶಯಗಳು..
ಚೆನ್ನೈ ಸೂಪರ್ ಕಿಂಗ್ಸ್ ಜೆರ್ಸಿಯ ಅರ್ಧ ಭಾಗ ಹಾಗೂ ಟೀಂ ಇಂಡಿಯಾ ಜೆರ್ಸಿಯ ಅರ್ಧಭಾಗವನ್ನು ತೊಟ್ಟಂತೆ ಕಾಣುವ ಫೋಟೋದಲ್ಲಿ ಮಾಹಿ ಮಿಂಚಿದ್ದಾರೆ. ಇನ್ನು, ಈ ಫೋಟೋದ ಹಿಂಭಾಗದಲ್ಲಿ ಸಿಂಹ, ವಿಶ್ವಕಪ್, ಧೋನಿಯ ನಾನಾ ರೀತಿಯ ಜೆರ್ಸಿ ತೊಟ್ಟಿರುವ ಫೋಟೋಗಳಿವೆ. ಒಟ್ಟಿನಲ್ಲಿ ಇದನ್ನು ನೋಡಿದ ಧೋನಿ ಹಾಗೂ ಸುದೀಪ್ ಫ್ಯಾನ್ಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು, ಜೆರ್ಸಿ ಬಿಡುಗಡೆ ಮಾಡಿ ಟ್ವೀಟ್ ಮಾಡಿದ ಕಿಚ್ಚ, "ಇವರು ಎಲ್ಲರ ಹೀರೋ. ಇವರು ಎಲ್ಲರ ಫೇವರೇಟ್, ಇವರು ಎಲ್ಲರ ಸ್ಟಾರ್, ಇವರು ಎಲ್ಲರ ಸ್ಫೂರ್ತಿ. ಎಂಎಸ್ ಧೋನಿ ಅವರ ಕಾಮನ್ ಡಿಪಿ ಅನಾವರಣ ಮಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ. ನಟನಾಗಿ ಅಲ್ಲ, ಓರ್ವ ಫ್ಯಾನ್ ಆಗಿ. ನಿಮಗೆ ಜನ್ಮದಿನದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ. ಇನ್ನು, ಟ್ವೀಟ್ ಮಾಡಿದ ಒಂದು ಗಂಟೆಯಲ್ಲಿ ಈ ಪೋಸ್ಟ್ಗೆ 10 ಸಾವಿರ ಲೈಕ್ಸ್ ಬಂದಿವೆ.