ಕರ್ನಾಟಕ

karnataka

ETV Bharat / sitara

ಪ್ರಶಾಂತ್ ಸಂಬರ್ಗಿ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಲು ಫಿಲ್ಮ್ ಚೇಂಬರ್ ನಿರ್ಧಾರ! - ಸ್ಯಾಂಡಲ್​ವುಡ್​​ ಡ್ರಗ್ಸ್​​ ಪ್ರಕರಣ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಸಮಾಜಿಕ ಹೋರಾಟಗಾರ ಪ್ರಶಾಂತ್​ ಸಂಬರ್ಗಿ ವಿರುದ್ಧ ದೂರು ನೀಡಲು ಚಲನಚಿತ್ರ ಮಂಡಳಿ ನಿರ್ಧರಿಸಿದೆ.

Karnataka Film Chamber of Commerce decided to register complaint against Prashanth sambaragi
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

By

Published : Sep 5, 2020, 7:15 PM IST

ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕಣಕ್ಕೆ ಸಂಬಂಧಿಸಿ ಸಮಾಜಿಕ ಹೋರಾಟಗಾರ ಪ್ರಶಾಂತ್​ ಸಂಬರ್ಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅವ್ಯವಹಾರ ಕುರಿತು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಚಲನಚಿತ್ರ ಮಂಡಳಿ ಪ್ರಶಾಂತ್​ ವಿರುದ್ಧ ದೂರು ನೀಡಲು ತೀರ್ಮಾನಿಸಿದೆ.

ಪ್ರಶಾಂತ್ ಸಂಬರ್ಗಿ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಲು ಫಿಲ್ಮ್ ಚೇಂಬರ್ ನಿರ್ಧಾರ

ಕನ್ನಡ ಚಿತ್ರರಂಗದಲ್ಲಿ ನಟ, ನಟಿಯರು ಡ್ರಗ್ಸ್ ತೆಗದುಕೊಳ್ಳುತ್ತಾರೆ ಎಂಬ ಆರೋಪ ಮಾಡಿದ್ದ ಪ್ರಶಾಂತ್ ಸಂಬರ್ಗಿ ಈ ಕುರಿತು ಮಾಹಿತಿ ನೀಡುವ ವೇಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ವಿಚಾರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು ಒಂದು ಸಭೆ ಕರೆದು, ಪ್ರಶಾಂತ್ ಸಂಬರ್ಗಿ ವಿರುದ್ಧ ಕಾನೂನು ಹೋರಾಟ ಮಾಡಲು ತೀರ್ಮಾನಿಸಿದೆ.

ಪ್ರಶಾಂತ್ ಸಂಬರ್ಗಿ ಚಿತ್ರರಂಗದವರು ಅಲ್ಲಾ, ಅವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಬಗ್ಗೆ ಮಾತನಾಡುವ ಹಕ್ಕು ಇಲ್ಲಾ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಗುಬ್ಬಿ ಜಯರಾಜ್, ಮಾಜಿ ಅಧ್ಯಕ್ಷರುಗಳಾದ ಸಾ. ರಾ. ಗೋವಿಂದ್, ಕೆ. ವಿ. ಚಂದ್ರುಶೇಖರ್, ಪ್ರಶಾಂತ್ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರಿನ ಪೊಲೀಸ್ ಆಯುಕ್ತರಿಗೆ ದೂರು ನೀಡುವ ಕುರಿತು ತೀರ್ಮಾನಿಸಿದರು.

ABOUT THE AUTHOR

...view details