ಕರ್ನಾಟಕ

karnataka

By

Published : Jul 27, 2019, 9:44 AM IST

ETV Bharat / sitara

'ಡಿಯರ್ ಕಾಮ್ರೇಡ್ ಬಹಿಷ್ಕರಿಸಿ'...ತೆಲುಗು ಚಿತ್ರದ ವಿರುದ್ಧ ಕನ್ನಡಿಗರ ಚಳವಳಿ

ಟಾಲಿವುಡ್​ನ ಡಿಯರ್ ಕಾಮ್ರೇಡ್ ಚಿತ್ರಕ್ಕೆ ಕರ್ನಾಟಕದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಈ ಚಿತ್ರವನ್ನು ಬಹಿಷ್ಕರಿಸುವಂತೆ ಕನ್ನಡಿಗರು ಆಂದೋಲನ ಶುರು ಮಾಡಿದ್ದಾರೆ.

ಡಿಯರ್ ಕಾಮ್ರೇಡ್

ತೆಲುಗಿನ ಡಿಯರ್ ಕಾಮ್ರೇಡ್ ಸಿನಿಮಾಗೆ ಕರ್ನಾಟಕದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ 'ಡಿಯರ್ ಕಾಮ್ರೇಡ್​​​ಗೆ ಬಹಿಷ್ಕಾರ' (#BoycottDearComrade) ಹ್ಯಾಷ್​​ ಟ್ಯಾಗ್​​ನಡಿ ಚಳವಳಿ ಶುರುವಾಗಿದೆ.

ಚಿತ್ರಕೃಪೆ: ಟ್ವಿಟರ್​

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಏಕಕಾಲದಲ್ಲಿ ಕನ್ನಡ ಭಾಷೆಗೂ ಡಬ್ ಆಗಿ ತೆರೆಕಂಡಿದೆ. ಆದರೆ, ಕರ್ನಾಟಕದಲ್ಲಿ ಕನ್ನಡಕ್ಕಿಂತ ತೆಲುಗು ವರ್ಷನ್ ಜಾಸ್ತಿ ಥಿಯೇಟರ್​​​ಗಳಲ್ಲಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಕನ್ನಡ ಅವತರಣಿಕೆಗೆ ಕಡಿಮೆ ಸಂಖ್ಯೆಯ ಚಿತ್ರಮಂದಿರಗಳು ದೊರೆತಿರುವುದು ಕನ್ನಡಿಗರನ್ನು ಹಾಗೂ ಡಬ್ಬಿಂಗ್ ಪರ ಹೋರಾಟಗಾರರನ್ನು ಕೆರಳಿಸಿದೆ.

ನಿನ್ನೆಯಿಂದ 'ಡಿಯರ್ ಕಾಮ್ರೇಡ್​​​ಗೆ ಬಹಿಷ್ಕಾರ' ವಿರೋಧಿ ಅಭಿಯಾನ ಶುರು ಮಾಡಿರುವ ನೆಟ್ಟಿಗರು, ಈ ಚಿತ್ರದ ಕನ್ನಡ ಆವತರಣಿಕೆಯ ಟ್ರೇಲರ್ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ. ಇದರರ್ಥ ನಮಗೆ ಕನ್ನಡದಲ್ಲಿರುವ ಚಿತ್ರವೇ ಬೇಕು ಎಂಬುದು. ಆದರೆ, ಕನ್ನಡಕ್ಕಿಂತ ತೆಲುಗು ವರ್ಷನ್​​​ ಚಿತ್ರವನ್ನೇ ಅಧಿಕ ಪ್ರಮಾಣದಲ್ಲಿ ರಿಲೀಸ್ ಮಾಡಲಾಗಿದೆ. ಈ ಮೂಲಕ ಇಲ್ಲಿಯ ಜನರ ಮೇಲೆ ತೆಲುಗು ಭಾಷೆ ಹೇರುವ ಪ್ರಯತ್ನ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರಕೃಪೆ: ಟ್ವಿಟರ್​

ಕನ್ನಡ ನೆಲದಲ್ಲಿ ಕನ್ನಡ ಚಿತ್ರಕ್ಕಿಂತ ಪರಭಾಷೆ ಚಿತ್ರಕ್ಕೆ ಅಧಿಕ ಚಿತ್ರಮಂದಿರಗಳನ್ನು ನೀಡಿರುವ ಕರ್ನಾಟಕ ವಾಣಿಜ್ಯ ಮಂಡಳಿ ವಿರುದ್ಧವೂ ಆಕ್ರೋಶ ವ್ಯಕ್ತವಾಗುತ್ತಿದೆ. ಕೆಎಫ್​​ಸಿ (ಕರ್ನಾಟಕ ಚಲನಚಿತ್ರ ಮಂಡಳಿ)ಯನ್ನು ತೆಲುಗು ಅವರಿಗೆ ಮಾರಾಟ ಮಾಡಿ ಎಂದು ಕನ್ನಡ ಪರ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.

ಇತ್ತ ಕನ್ನಡ ಭಾಷೆ ಕಷ್ಟ ಎಂದು ಹೇಳಿದ ಕೊಡವತಿ ರಶ್ಮಿಕಾ ಮಂದಣ್ಣ ವಿರುದ್ಧವೂ ಆಕ್ರೋಶ ವ್ಯಕ್ತವಾಗುತ್ತಿದೆ. ಇವರನ್ನು ಕನ್ನಡ ಚಿತ್ರರಂಗದಿಂದ ಬಹಿಷ್ಕರಿಸಿ, ಕರ್ನಾಟಕದಲ್ಲಿ ಇವರ ಚಿತ್ರಗಳ ಮೇಲೆ ನಿಷೇಧ ಹೇರಿ ಎನ್ನುವ ಕೂಗು ಬಲವಾಗಿ ಕೇಳಿ ಬರುತ್ತಿದೆ.

ABOUT THE AUTHOR

...view details