ಕರ್ನಾಟಕ

karnataka

By

Published : Mar 15, 2019, 2:20 PM IST

ETV Bharat / sitara

ಕಾಲವಾದ ಇಬ್ಬರು ತಾರೆಯರ ಕಡೆ ಸಿನಿಮಾ ಇಂದು ಬಿಡುಗಡೆ

ಈ ವಾರ ತೆರೆ ಕಂಡಿರುವ ಆರು ಕನ್ನಡ ಸಿನಿಮಾಗಳಲ್ಲಿ ‘ಗಿರ್​​ಗಿಟ್ಲೆ’ ಮಾತ್ರ ಹೆಚ್ಚು ಗಮನ ಸೆಳೆಯುತ್ತಿದೆ. ಇದು ಕಾಲವಾಗಿರುವ ನಿರ್ದೇಶಕ ಎ.ಆರ್. ಬಾಬು ಮತ್ತು ಖಳನಟ ರಾಘವ್ ಉದಯ್ ಅವರುಗಳು ನಟಿಸಿರುವ  ಕಡೆಯ ಸಿನಿಮಾ.

ದಿವಂಗತ ಎ.ಆರ್​.ಬಾಬು ಹಾಗೂ ಖಳನಟ ಉದಯ್​

ದಿವಂಗತ ಎ ಆರ್ ಬಾಬು ಅನೇಕ ಸಿನಿಮಾಗಳನ್ನು ನಿರ್ದೇಶಿಸಿ, ಪ್ರೇಮ್ ಅಂತ ನಿರ್ದೇಶಕರನ್ನು ಬೆಳಕಿಗೆ ತಂದವರು. ಅಗಾಗೆ ಅವರು ಚಿತ್ರಗಳಲ್ಲೂ ಅಭಿನಯಿಸುತ್ತಿದ್ದರು. ಇವರು ಕಳೆದ ವರ್ಷ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದರು. ಗಿರ್​​ಗಿಟ್ಲೆ ಇವರು ನಟಿಸಿರುವ ಕೊನೆಯ ಚಿತ್ರವಾಯಿತು.

ಇನ್ನು ರಾಘವ್ ಉದಯ್ 2016 ನವೆಂಬರ್ 8 ರಂದು ಮಾಸ್ತಿಗುಡಿ ಚಿತ್ರೀಕರಣದ ವೇಳೆ ಹೆಲಿಕಾಪ್ಟರ್​ನಿಂದ ಅನಿಲ್ ಜೊತೆ ಹಾರಿ ತಿಪ್ಪಗೊಂಡನ ಹಳ್ಳಿ ಕೆರೆಯಲ್ಲಿ ಪ್ರಾಣ ಕಳೆದುಕೊಂಡರು. ಉದಯ್ ಈ ವಾರದ ‘ಗಿರ್​​ಗಿಟ್ಲೆ’ ಕನ್ನಡ ಸಿನಿಮಾದಲ್ಲಿ ಮುಖ್ಯ ಖಳನ ಪಾತ್ರ ನಿರ್ವಹಿಸಿದ್ದಾರೆ. ಅವರು 2016 ನವೆಂಬರ್ ತಿಂಗಳಿಗೂ ಮುಂಚೆ ಚಿತ್ರದಲ್ಲಿ ಅಭಿನಯಿಸಿ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಸಹ ಮಾಡಿದ್ದರು.

ಎ ಆರ್ ಬಾಬು ಮತ್ತು ರಾಘವ್ ಉದಯ್ ನೆನಪಿನೊಂದಿಗೆ ‘ಗಿರ್ಗಿಟ್ಲೆ’ ಈ ವಾರ ಬಿಡುಗಡೆ ಭಾಗ್ಯ ಮೂರು ವರ್ಷಗಳ ನಂತರ ಕಾಣುತ್ತಿದೆ.

For All Latest Updates

TAGGED:

ABOUT THE AUTHOR

...view details