ಕರ್ನಾಟಕ

karnataka

ETV Bharat / sitara

ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ರಾಜನ್ ನಿಧನ - ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ರಾಜನ್ ನಿಧನ

ಐದು ಭಾಷೆಗಳಲ್ಲಿ ಸುಮಾರು 350ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ರಾಜನ್-ನಾಗೇಂದ್ರ ಜೋಡಿಗೆ ಎರಡು ಕನಸು, ಪರಸಂಗದ ಗೆಂಡೆ ತಿಮ್ಮ ಚಿತ್ರಗಳಿಗೆ ಶ್ರೇಷ್ಠ ಸಂಗೀತ ನಿರ್ದೇಶಕ ರಾಜ್ಯ ಪ್ರಶಸ್ತಿ ಬಂದಿದೆ.

Kannada Famous music director Rajan dies
ಸಂಗೀತ ನಿರ್ದೇಶಕ ರಾಜನ್ ನಿಧನ

By

Published : Oct 12, 2020, 7:18 AM IST

Updated : Oct 12, 2020, 5:41 PM IST

ಕನ್ನಡ ಚಿತ್ರ ಗೀತೆಗಳಿಗೆ ಸ್ಪಷ್ಟ ಸ್ವರೂಪ ನೀಡಿದ ಹೆಗ್ಗಳಿಕೆಯ ರಾಜನ್ ನಾಗೇಂದ್ರ ಜೋಡಿಯ ರಾಜನ್ ಭಾನುವಾರ ರಾತ್ರಿ ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷವಾಗಿತ್ತು. ನಾಗೇಂದ್ರ ಅವರು 2000ರಲ್ಲಿ ಇಹಲೋಕ ತ್ಯಜಿಸಿದ್ದರು.

ಸಂಗೀತ ನಿರ್ದೇಶಕ ರಾಜನ್

ರಾಜನ್ 1933ರಲ್ಲಿ ಜನಿಸಿದ್ದರು. ಇವರ ತಂದೆ ಬಿ. ರಾಜಪ್ಪನವರು ಸಂಗೀತ ವಿದ್ವಾಂಸರು. ಈ ಸೋದರರಿಗೆ ರಂಗಭೂಮಿಯಲ್ಲಿ ಆಸಕ್ತಿ ಬರಲು ತಂದೆಯೇ ಪ್ರೇರಣೆ. ಅವರಲ್ಲಿ ರಾಜನ್ ಪಿಟೀಲು ವಾದನದಲ್ಲಿ ಪರಿಣಿತಿ ಪಡೆದು ರ್ಯಾಂಕ್ ಸಹ ಪಡೆದರು. ಸಹೋದರರು (ರಾಜನ್-ನಾಗೇಂದ್ರ) ಪದ್ಮನಾಭ ಶಾಸ್ತ್ರಿಗಳ ಬಳಿ ಸಹಾಯಕ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. 1952ರಲ್ಲಿ ‘ಸೌಭಾಗ್ಯ ಲಕ್ಷ್ಮಿ’ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು. ಕನ್ಯಾದಾನ, ಮುತ್ತೈದೆ ಭಾಗ್ಯ, ಮಂತ್ರಾಲಯ ಮಹಾತ್ಮೆ ಚಿತ್ರಗಳು ಅವರ ಸ್ಥಾನವನ್ನು ಗಟ್ಟಿಗೊಳಿಸಿದ ಚಿತ್ರಗಳು. ಮುಂದೆ ವೀರ ಸಂಕಲ್ಪ, ಕಿಟ್ಟು ಪುಟ್ಟು, ದೇವರ ದುಡ್ಡು, ಪರಸಂಗದ ಗೆಂಡೆ ತಿಮ್ಮ, ಹೊಂಬಿಸಿಲು, ಬಯಲು ದಾರಿ, ಗಂಧದ ಗುಡಿ, ಚಲಿಸುವ ಮೊಡಗಳು ಮೊದಲಾದ ಚಿತ್ರಗಳಿಗೆ ವಿಶಿಷ್ಟ ಸಂಗೀತವನ್ನು ನೀಡಿದರು.

ರಾಜನ್ ನಾಗೇಂದ್ರ

ಐದು ಭಾಷೆಗಳಲ್ಲಿ ಸುಮಾರು 350ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ರಾಜನ್ ನಾಗೇಂದ್ರ ಜೋಡಿಗೆ ಎರಡು ಕನಸು, ಪರಸಂಗದ ಗೆಂಡೆತಿಮ್ಮ ಚಿತ್ರಗಳಿಗೆ ಶ್ರೇಷ್ಠ ಸಂಗೀತ ನಿರ್ದೇಶಕ ರಾಜ್ಯ ಪ್ರಶಸ್ತಿ ಬಂದಿದೆ. 1976ರಲ್ಲಿ ಪಂತುಲಮ್ಮ ಚಿತ್ರಕ್ಕಾಗಿ ಆಂಧ್ರ ಪ್ರದೇಶ ಸರ್ಕಾರದ ಮೊದಲ ರಾಜ್ಯ ಪ್ರಶಸ್ತಿಯನ್ನ ಪಡೆದಿದ್ದರು.

ರಾಜನ್

2000 ಸಹೋದರ ನಾಗೇಂದ್ರ ನಿಧನ ಮೇಲೆ ರಾಜನ್ ಅವರು ಪುತ್ರ ಅನಂತ್ ಜೊತೆ ಸಂಗೀತ ಸೇವೆಯನ್ನು ಮುಂದುವರೆಸಿಕೊಂಡು ಬಂದಿದ್ದರು.

Last Updated : Oct 12, 2020, 5:41 PM IST

ABOUT THE AUTHOR

...view details