ಕರ್ನಾಟಕ

karnataka

ETV Bharat / sitara

'ಅಮರ್' ಫಸ್ಟ್ ಹಾಫ್​ ಸೂಪರ್​! ಕ್ಯೂರಿಯಾಸಿಟಿ ಕಾಯ್ದುಕೊಂಡ ಸೆೆಕಂಡ್ ಹಾಫ್ - ಥಿಯೇಟರ್​

ಅಂಬಿ ಪುತ್ರನ 'ಅಮರ್' ಚಿತ್ರ ಇಂದು ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಎಲ್ಲೆಡೆ ಹೌಸ್​ಫುಲ್​ ಬೋರ್ಡುಗಳು ಥಿಯೇಟರ್​ ಎದುರು ನೇತಾಡುತ್ತಿವೆ.

ಅಮರ್

By

Published : May 31, 2019, 12:16 PM IST

'ಅಮರ್' ಚಿತ್ರ ಮಧ್ಯಂತರದ ವರೆಗೆ ಅದ್ಭುತವಾಗಿ ಮೂಡಿ ಬಂದಿದೆ. ನಾಯಕ ನಟ ಅಭಿಷೇಕ್​ ಚೊಚ್ಚಲ ಚಿತ್ರಕ್ಕೆ ಶಕ್ತಿ ಮೀರಿ ಶ್ರಮವಹಿಸಿದ್ದಾರೆ​. ಚಿತ್ರದಲ್ಲಿ ಲವರ್​ ಬಾಯ್ ಆಗಿರುವ ಅವರು, ಆಗರ್ಭ ಶ್ರೀಮಂತನ ಮಗಳನ್ನು ಪ್ರೀತಿಸುತ್ತಿರುತ್ತಾನೆ. ಆದರೆ, ಅವಳು ಇನ್ನೊಬ್ಬ ಹುಡುಗನ ಜತೆ ಎಂಗೇಜ್ಮೆಂಟ್​ ಮಾಡಿಕೊಂಡು, ಅಭಿಗೆ ಮೋಸ ಮಾಡುತ್ತಾಳೆ. ಇದು ನಾಯಕನನ್ನು ಬಾಧಿಸುವುದಿಲ್ಲ. ಬದಲಾಗಿ ಹುಡುಗಿ ಅಪ್ಪನ ಜತೆಗೇ ಡೀಲ್ ಮಾಡಿ, 50 ಕೋಟಿ ರೂಪಾಯಿಗೆ ತನ್ನ ಪ್ರೀತಿ ಮಾರಿಕೊಳ್ಳುತ್ತಾನೆ. ಚಿತ್ರಕ್ಕೆ ಮಧ್ಯಂತರ ತೆರೆ ಎಳೆಯುವ ಮುಂಚೆಯೇ ನಾಯಕ-ನಾಯಕಿ ಬೇರೆ ಬೇರೆಯಾಗುತ್ತಾರೆ. ಮುಂದೆ ಕಥೆ ಹೇಗೆ ಸಾಗುತ್ತದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಇನ್ನು ಚಿತ್ರದಲ್ಲಿ ಅಂಬರೀಶ್ ಅವರ ಪ್ರಭಾವ ತುಂಬಾನೇ ಇದೆ ಅಂತಾ ಹೇಳಬಹುದು. ಪರರಿಗೆ ನೀಡಿದ ಪ್ರಾಮೀಸ್​ಗೆ ಬದ್ಧನಾಗಿರುವ ನಟ, ಎಂತಹ ಕಷ್ಟಬಂದರೂ ಕೊಟ್ಟ ಮಾತಿನಿಂದ ಹಿಂದೆ ಸರಿಯುವುದಿಲ್ಲ. ಇದು ಅಂಬರೀಶ್ ಅವರ ಕರ್ಣನ ಗುಣವನ್ನು ತೋರಿಸುತ್ತದೆ. ಅಪ್ಪನಂತೆಯೇ ಕೆಲ ಡೈಲಾಗ್ ಹೊಡೆದಿರುವ ಅಭಿ, ರೆಬೆಲ್ ಸ್ಟಾರ್ ಅಂಬರೀಶ್​ ಅವರನ್ನು ನೆನಪಿಸುತ್ತಾರೆ. ಚಿತ್ರದಲ್ಲಿ ಒಂದು ಹಾಡು ಅದ್ಭುತವಾಗಿ ಮೂಡಿಬಂದಿದೆ. ಆ್ಯಕ್ಷನ್ ಸೀನ್​ಗಳಲ್ಲಿಯೂ ಮಾಗಿದವರಂತೆ ನಟಿಸಿದ್ದಾರೆ ಜ್ಯೂನಿಯರ್ ಜಲೀಲಾ.

ABOUT THE AUTHOR

...view details