ಕನ್ನಡ ಸಿನಿಮಾ ಕ್ಷೇತ್ರದಲ್ಲಿ ‘ಅಮೃತ ವರ್ಷಿಣಿ’ ಇಂದ ಜನಪ್ರಿಯತೆ ಸಂಪಾದಿಸಿಕೊಂಡು ತಮ್ಮ ಗೀತ ರಚನೆ ಕ್ಷೇತ್ರದಲ್ಲಿ ನೂರಾರು ಕನ್ನಡ ಸಿನಿಮಾಗಳಿಗೆ ಉತ್ತಮ ಸಾಹಿತ್ಯ ನೀಡುತ್ತಾ ಬಂದಿರುವ ಕೆ. ಕಲ್ಯಾಣ್ ಸಂಗೀತ ನಿರ್ದೇಶಕರೂ ಹೌದು. ಅವರು ಒಂದು ಸಿನಿಮಾದ ನಿರ್ದೇಶನ ಸಹ ಮಾಡಿದ್ದಾರೆ. 2017ರಲ್ಲಿ ವಾಚ್ಮನ್ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದರೂ ಅದು ಇನ್ನೂ ಬಿಡುಗಡೆ ಆಗಿಲ್ಲ.
ಕೆ ಕಲ್ಯಾಣ್ ಹಾಡಿರುವ ಹಾಡು ಊರ್ ತುಂಬಾ ಹೂಡಿಗೀರ್ ನಮಗಂತ ಯಾರವರೋ.. ಯಾರೊಬ್ಬರು ಸಿಗ್ತಾ ಇಲ್ವಲ್ಲೋ.. ಪಡ್ಡೆ ಹುಡುಗರಿಗೆ ಹೇಳಿ ಮಾಡಿಸಿದ ಗೀತೆ. ‘ಜೊತೆಯಾಗಿರು’ ಕನ್ನಡ ಸಿನಿಮಾಕ್ಕೆ ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಸತೀಶ್‌ಕುಮಾರ್ ಈ ಹಿಂದೆ ‘ಅಲೆ ಮತ್ತು ಅಜರಾಮರ’ ಸಿನಿಮಾಗಳಿಗೆ ಸಹಾಯಕ ನಿರ್ದೇಶಕ ಆಗಿದ್ದವರು ಈಗ ಪೂರ್ಣ ಪ್ರಮಾಣದ ನಿರ್ದೇಶಕ ಆಗುತ್ತಿದ್ದಾರೆ.