ಪುನೀತ್ ರಾಜ್ಕುಮಾರ್ ಅಭಿನಯದ 'ಜೇಮ್ಸ್' ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಶುರುವಾಗಿವೆ. ಈ ಮಧ್ಯೆ, ಚಿತ್ರದ ಸಂಬಂಧ ದೊಡ್ಡ ಸುದ್ದಿಯೊಂದು ಬಂದಿದೆ. ಮೂಲಗಳ ಪ್ರಕಾರ, ಚಿತ್ರದ ಸ್ಯಾಟ್ಲೈಟ್ ಹಕ್ಕುಗಳನ್ನು ಸ್ಟಾರ್ ಸುವರ್ಣ ಖರೀದಿಸಿದ್ದು, ದಾಖಲೆಯ 15 ಕೋಟಿ ರೂ.ಗಳಿಗೆ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಚಿತ್ರ ತಂಡದವರು ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಆದರೆ, ಚಿತ್ರವು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ ಎಂದಷ್ಟೇ ಹೇಳಲಾಗುತ್ತಿದೆ. ಇದುವರೆಗೂ ಕನ್ನಡ ಚಿತ್ರಗಳ ಸ್ಯಾಟ್ಲೈಟ್ ಹಕ್ಕುಗಳು 10ರಿಂದ 12 ಕೋಟಿ ರೂ.ವರೆಗೂ ಮಾರಾಟವಾದ ಸುದ್ದಿ ಇತ್ತು. ಆದರೆ, ಜೇಮ್ಸ್ ಅದನ್ನೂ ಮೀರಿಸಿದೆ ಎಂದು ಹೇಳಲಾಗುತ್ತಿದ್ದು, 15 ಕೋಟಿ ರೂ.ಗಳಿಗೆ ಸ್ಟಾರ್ ಸುವರ್ಣ ಖರೀದಿಸಿದೆ ಎಂದು ಹೇಳಲಾಗುತ್ತಿದೆ.