'ಇವಳು ಬರೋವರ್ಗು ಮಾತ್ರ ನನ್ನ ಹವಾ.. ಇವಳು ಬಂದಾಗಲಿಂದ ಬರೀ ಇವಳದ್ದೇ ಹವಾ' ಎಂದು ರಾಕಿಂಗ್ ಸ್ಟಾರ್ ಯಶ್ ತಮ್ಮ ಮಗಳ ಗುಣಗಾನ ಮಾಡಿದ್ದರು. ಇದೀಗ ಈ ಮಾತು ದಿಟವಾಗುತ್ತಿದೆ.
ಇನ್ಸ್ಟಾದಲ್ಲಿ ಯಶ್ ಹವಾ ಧೂಳೀಪಟ ಮಾಡಿದ ಮಗಳು... ಅಪ್ಪನ ಮಾತು ಸತ್ಯ ಮಾಡ್ತಿದ್ದಾಳೆ 'YR baby'...! - ಫಸ್ಟ್ ಲುಕ್
ಯಶ್ ಮಗಳ ಫೋಟೋ ಕೂಡ ಸಾಕಷ್ಟು ವೈರಲ್ ಆಗಿದೆ. ಇದುವರಗೆ ಬರೋಬ್ಬರಿ 3 ಲಕ್ಷಕ್ಕೂ ಹೆಚ್ಚು ಜನರು ಮೆಚ್ಚಿ ಕಾಮೆಂಟ್ಗಳನ್ನು ಮಾಡಿದ್ದಾರೆ. ಪರಭಾಷೆಯ ಸುದ್ದಿ ಪತ್ರಿಕೆಗಳು ಕೂಡ ಈ ಫೋಟೋ ಪ್ರಕಟಿಸಿವೆ.
ಹೌದು, ಅಕ್ಷಯ ತೃತೀಯ ದಿನದಂದು ಯಶ್-ರಾಧಿಕಾ ಪಂಡಿತ್ ದಂಪತಿಯ ಮುದ್ದಿನ ಮಗಳ ಮೊದಲ ಫೋಟೋ ರಿವೀಲ್ ಆಗಿತ್ತು. ನಾಲ್ಕು ತಿಂಗಳ ಬಳಿಕ ಅಭಿಮಾನಿಗಳಿಗೆ ತಮ್ಮ ಪ್ರಿನ್ಸಸ್ ಮುಖ ತೋರಿಸಿತ್ತು ಈ ತಾರಾ ಜೋಡಿ. ಮೊದಲ ದಿನವೇ ಯಶ್ ಮಗಳ ಫಸ್ಟ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿತ್ತು. ಮೆಚ್ಚುಗೆಯ ಮಹಾಪುರವೇ ಹರಿದು ಬಂದಿತ್ತು. ಎಲ್ಲರೂ ಈ ಕ್ಯೂಟ್ YR ಬೇಬಿಯ ಪಟವನ್ನು ವಾಟ್ಸಾಪ್, ಫೇಸ್ಬುಕ್ಗಳಲ್ಲಿ ಸ್ಟೇಟಸ್ ಇಟ್ಟು ಸಂಭ್ರಮಿಸಿದ್ದರು.
ಇದಾದ ನಂತರ 'YR baby'ಯ ಸರಣಿ ಫೋಟೋಗಳು ಯಶ್ ಮನೆಯಿಂದ ಹೊರಬೀಳುತ್ತಿವೆ. ಯಶ್ ಹಾಗೂ ರಾಧಿಕಾ ಮೂರು ದಿನಗಳ ಹಿಂದೆಯಷ್ಟೆ ಮಗಳನ್ನು ಎದೆಗೆ ಅವಚಿಕೊಂಡಿರುವ ಫೋಟೋ ಇನ್ಸ್ಟಾಗ್ರಾಂಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಕೂಡ ಸಾಕಷ್ಟು ವೈರಲ್ ಆಗಿದೆ. ಇದುವರಗೆ ಬರೋಬ್ಬರಿ 3 ಲಕ್ಷಕ್ಕೂ ಹೆಚ್ಚು ಜನರು ಮೆಚ್ಚಿ ಕಾಮೆಂಟ್ಗಳನ್ನು ಮಾಡಿದ್ದಾರೆ. ಪರಭಾಷೆಯ ಸುದ್ದಿ ಪತ್ರಿಕೆಗಳು ಕೂಡ ಈ ಫೋಟೋ ಪ್ರಕಟಿಸಿವೆ. ಇದನ್ನೆಲ್ಲ ನೋಡಿದ ಯಶ್ ಅಭಿಮಾನಿಗಳು, ಇವಾಗಲೇ ಈ ಪರೀ ಹವಾ..ಇನ್ಮುಂದೆ ಸುನಾಮಿನೇ ಎನ್ನುತ್ತಿದ್ದಾರೆ.