ಕರ್ನಾಟಕ

karnataka

By

Published : May 20, 2021, 2:26 PM IST

ETV Bharat / sitara

ಡಾ.ರಾಜ್ ಯೋಗಗುರು ಹೊನ್ನಪ್ಪ ನಾಯ್ಕರ್ ಕೋವಿಡ್​ನಿಂದ ನಿಧನ

ಡಾ.ರಾಜ್​ಕುಮಾರ್​ ಅವರ ಯೋಗಗುರು, ಹೊನ್ನಪ್ಪ ನಾಯ್ಕರ್ ಅವರು ಕೊರೊನಾದಿಂದ ಚೇತರಿಸಿಕೊಳ್ಳದೆ ಕೊನೆಯುಸಿರೆಳೆದಿದ್ದಾರೆ.

honnappa-naikar-died-due-to-corona
ಹೊನ್ನಪ್ಪ ನಾಯ್ಕರ್ ಕೋವಿಡ್​ನಿಂದ ನಿಧನ

ವರನಟ ಡಾ.ರಾಜ್​ಕುಮಾರ್​ ಅವರ ಯೋಗಗುರು ಹೊನ್ನಪ್ಪ ನಾಯ್ಕರ್​​ (90) ಇಂದು ಬೆಳಗ್ಗೆ ಕೊರೊನಾದಿಂದ ನಿಧನರಾಗಿದ್ದಾರೆ.

ಹೊನ್ನಪ್ಪ ಅವರು ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ರಾಜಕುಮಾರ್ ಸೇರಿದಂತೆ, ನಾಡಿನ ಸಾಕಷ್ಟು ಗಣ್ಯ ವ್ಯಕ್ತಿಗಳಿಗೆ ಇವರು ಯೋಗಾಸನ ಹೇಳಿಕೊಟ್ಟಿದ್ದರು.

ಹೊನ್ನಪ್ಪ ನಾಯ್ಕರ್

ಬೆಂಗಳೂರಿನ ಜೆ.ಪಿ ನಗರದಲ್ಲಿ ವಾಸವಿದ್ದ ಹೊನ್ನಪ್ಪ ಅವರಿಗೆ ಮೂವರು ಗಂಡು ಮಕ್ಕಳಿದ್ದಾರೆ. ಕನಕಪುರದ ಬಳಿ ಇವರ ಯೋಗಾಶ್ರಮವಿದೆ. ಕನಕಪುರದ ನಾಗದೇವನಹಳ್ಳಿಬಳಿ ಮೃತರ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.

ಹೊನ್ನಪ್ಪ ನಾಯ್ಕರ್ ಅವರ ಆತ್ಮೀಯರು ಹಾಗು ಸಿನಿಮಾ ನಿರ್ಮಾಪಕರಾದ ಎಸ್.ಎ. ಚಿನ್ನೇಗೌಡ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ:ಬೆಳಗಾವಿಯಲ್ಲಿ ಮಕ್ಕಳ ಮೇಲೆ ಲಸಿಕೆ ಕ್ಲಿನಿಕಲ್ ಟ್ರಯಲ್ ಯಶಸ್ವಿ: ಡಾ. ಅಮಿತ್ ಭಾತೆ

ABOUT THE AUTHOR

...view details