ಕರ್ನಾಟಕ

karnataka

ETV Bharat / sitara

ಡ್ರಗ್ಸ್‌ ಪ್ರಕರಣದ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು: ನಟಿ ಹರಿಪ್ರಿಯಾ - haripriya news

'ನಾವು ಸೆಲೆಬ್ರಿಟಿಗಳು. ಸಮಾಜಕ್ಕೆ ಮಾದರಿಯಾಗಿರಬೇಕು. ನಮ್ಮನ್ನು ಸಾಕಷ್ಟು ಅಭಿಮಾನಿಗಳು ಅನುಸರಿಸುತ್ತಾರೆ' ಅಂತ ಡ್ರಗ್ಸ್​​ ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ನಟಿ ಹರಿಪ್ರಿಯಾ ಉತ್ತರಿಸಿದರು.

haripriya speak about drug case
ಡ್ರಗ್​​ ಪ್ರಕರಣ : ನಾವು ಸಮಾಜಕ್ಕೆ ಮಾದರಿಯಾಗಿರಬೇಕು ಅಂದ್ರು ಹರಿಪ್ರಿಯಾ

By

Published : Oct 17, 2020, 5:12 PM IST

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್​​​ವುಡ್​​ನಲ್ಲಿ ಈಗಾಗಲೇ ನಟಿ ರಾಗಿಣಿ ದ್ವಿವೇದಿ ಹಾಗು ಸಂಜನಾ ಗರ್ಲಾನಿ ಜೈಲು ಪಾಲಾಗಿದ್ದಾರೆ. ಈ ಡ್ರಗ್ಸ್ ಜಾಲ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಬೇರು ಬಿಟ್ಟಿರೊಂದ್ರಿಂದ ಸಿಸಿಬಿ ಪೊಲೀಸರು, ಸಿನಿಮಾ ತಾರೆಯರು, ರಾಜಕಾರಣಿಗಳ ಮಕ್ಕಳು, ಡ್ರಗ್ಸ್ ಪೆಡ್ಲರ್​​ಗಳನ್ನು ಕರೆದು ವಿಚಾರಣೆ ಮಾಡುತ್ತಿದ್ದಾರೆ. ಈ ಕುರಿತಾಗಿ ಸ್ಯಾಂಡಲ್​​​ವುಡ್ ನಟಿ ಹರಿಪ್ರಿಯಾ ಪ್ರತಿಕ್ರಿಯಿಸಿದ್ದಾರೆ.

ಡ್ರಗ್​​ ಪ್ರಕರಣ ಸಂಬಂಧ ಹರಿಪ್ರಿಯಾ ಪ್ರತಿಕ್ರಿಯೆ

'ಈ ಡ್ರಗ್ಸ್ ವಿಚಾರ ನನಗೆ ಗೊತ್ತಿಲ್ಲ. ನಾನು ಯಾವ ಪಾರ್ಟಿಗೂ ಹೋಗಿಲ್ಲ. ಆದರೆ ಈ ಪ್ರಕರಣದಲ್ಲಿ ಯಾರು ತಪ್ಪಿತಸ್ಥರಿದ್ದಾರೋ ಅವ್ರಿಗೆ ಶಿಕ್ಷೆ ಆಗಬೇಕು' ಅಂತಾ ಹೇಳಿದ್ದಾರೆ.

'ನಾವು ಸೆಲೆಬ್ರಿಟಿಗಳು. ಸಮಾಜಕ್ಕೆ ಮಾದರಿಯಾಗಿರಬೇಕು. ನಮ್ಮನ್ನು ಸಾಕಷ್ಟು ಅಭಿಮಾನಿಗಳು ನೋಡಿ ಕಲಿಯುತ್ತಾರೆ' ಅನ್ನೋದು ಹರಿಪ್ರಿಯಾ ಅಭಿಪ್ರಾಯ.

ABOUT THE AUTHOR

...view details