ಬೆಂಗಳೂರು :ಸ್ಯಾಂಡಲ್‌ವುಡ್ ಅಲ್ಲದೇ ಪರ ಭಾಷೆಯಲ್ಲೂ ಸದ್ದು ಮಾಡ್ತಿರೋ ಸಿನಿಮಾ ಸಖತ್. ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ಕೆರಿಯರ್‌ನಲ್ಲಿ ನೆನಪಿನಲ್ಲಿ ಉಳಿಯುವಂತಹ ಸಿನಿಮಾ ಆಗಲಿದೆ ಸಖತ್.. ಹೆಚ್ಚಾಗಿ ಲವರ್ ಬಾಯ್ ಇಮೇಜ್‌ನಿಂದಲೇ ಕನ್ನಡ ಸಿನಿಮಾ ಪ್ರೇಕ್ಷಕರ ಮನ ಗೆದ್ದಿರುವ ಗೋಲ್ಡನ್ ಸ್ಟಾರ್ ಇದೇ ಮೊದಲ ಬಾರಿಗೆ ಎರಡು ಶೇಡ್ ಇರುವ ಅಂಧನ ಪಾತ್ರ ಮಾಡಿದ್ದಾರೆ.
Movie Sakath :ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನದಲ್ಲಿ ಗಣೇಶ್ ಇಂತಹದೊಂದು ಕ್ಯಾರೆಕ್ಟರ್ ಮಾಡಿರೋದು ಅವರ ಅಭಿಮಾನಿಗಳಲ್ಲಿ 'ಸಖತ್' ಸಿನಿಮಾ ಬಗ್ಗೆ ಕುತೂಹಲ ಹುಟ್ಟಿಸಿದೆ.
ಟೀಸರ್ ಹಾಗೂ ಹಾಡುಗಳಿಂದಲೇ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಈ ಸಿನಿಮಾ ಇದೇ ನ.26ಕ್ಕೆ ಬಿಡುಗಡೆ ಆಗುತ್ತಿದೆ. ಎರಡು ವರ್ಷಗಳ ಬಳಿಕ ಬೆಳ್ಳಿ ತೆರೆ ಮೇಲೆ ಬರ್ತಾ ಇರೋ ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ ಅಂತಾರೆ ಗಣೇಶ್.
ನನ್ನ ಸಿನಿಮಾ ಕೆರಿಯರ್‌ನಲ್ಲೇ ಇದು ಚಾಲೆಂಜಿಂಗ್ ಪಾತ್ರ ; ಫ್ಯಾನ್ಸ್‌ಗೆ 'ಸಖತ್' ಇಷ್ಟ ಆಗುತ್ತೆ ಎಂದ ಗೋಲ್ಡನ್ ಸ್ಟಾರ್ Actor Ganesh :ಚಮಕ್ ಸಿನಿಮಾ ಬಳಿಕ ನಿರ್ದೇಶಕ ಸಿಂಪಲ್ ಸುನಿ ಹಾಗೂ ಗಣೇಶ್ ಮತ್ತೆ ಒಂದಾಗಿದ್ದಾರೆ. ಗಣೇಶ್‌ಗೆ ನಿರ್ದೇಶಕ ಸಿಂಪಲ್ ಸುನಿ ಕಥೆ ಕೇಳಿದ ತಕ್ಷಣವೇ, ಈ ಸಿನಿಮಾ ಮಾಡೋಣ ಅಂತಾ ಹೇಳಿದ್ರಂತೆ ಗಣೇಶ್. ಅಂಧನ ಪಾತ್ರಕ್ಕಾಗಿ ನಾನು ಒಂದಿಷ್ಟು ಸಿದ್ಧತೆಗಳನ್ನ ಮಾಡಿಕೊಂಡ ಬಳಿಕ ಸಿನಿಮಾ ಶೂಟಿಂಗ್‌ಗೆ ಹೋದೆ ಅಂತಾ ಗಣೇಶ್ ವಿವರಿಸಿದ್ದಾರೆ. ಕಣ್ಣು ಕಾಣದ ಅಂಧರು ಹೇಗೆ ಇರ್ತಾರೆ? ಅವರ ಹಾವ-ಭಾವ ಹೇಗಿರುತ್ತವೆ, ಬ್ಲೈಂಡ್ ಸ್ಟಿಕ್ ಅನ್ನು ಹೇಗೆ ಬಳಸುತ್ತಾರೆ ಅನ್ನೋದನ್ನ ಗಣೇಶ್ ಅಭ್ಯಾಸ ಮಾಡಿ ಸಖತ್ ಸಿನಿಮಾದಲ್ಲಿ ಅಭಿನಯಿಸಿದ್ದಾರಂತೆ.
ರಂಗಾಯಣ ರಘು, ಧರ್ಮಣ್ಣ, ಸಾಧು ಕೋಕಿಲ ಕಾಮಿಡಿ ಪಂಚ್ :ಸಖತ್ ಸಿನಿಮಾದಲ್ಲಿ ಗಣೇಶ್ ಕಟೆಕಟೆಯಲ್ಲಿ ನಿಂತಿಕೊಳ್ಳುವ ಸನ್ನಿವೇಶ ಈಗಾಗ್ಲೇ ಸಿಕ್ಕಾಪಟ್ಟೇ ಗಮನ ಸೆಳೆಯುತ್ತಿದೆ. ಇದೊಂದು ಥ್ರಿಲ್ಲಿಂಗ್‌ನಿಂದ ಕೂಡಿರುವ ಎಲಿಮೆಂಟ್ಸ್ ಅಂತಾರೆ ಗಣೇಶ್. ನಿಶ್ವಿಕಾ ನಾಯ್ಡು ಕೂಡ ಈ ಸಿನಿಮಾದಲ್ಲಿ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಇದರ ಜೊತೆಗೆ ರಂಗಾಯಣ ರಘು, ಧರ್ಮಣ್ಣ, ಸಾಧು ಕೋಕಿಲ ಎಪಿಸೋಡು ನೋಡುಗರನ್ನ ನಕ್ಕು ನಲಿಸುತ್ತೆ ಅಂತಾ ಗಣೇಶ್ ವಿಶ್ವಾಸವನ್ನ ವ್ಯಕ್ತಪಡಿಸಿದರು.
ಸಖತ್ ಸಿನಿಮಾದಲ್ಲಿ ನಾನು ಮಾಡಿರೋ ಪಾತ್ರ ಹೊಸ ಅನುಭವ ಕೊಡುತ್ತೆ. ಇದು ನನ್ನ ಅಭಿಮಾನಿಗಳಿಗೆ ತುಂಬಾನೇ ಇಷ್ಟ ಆಗುತ್ತೆ ಅಂತಾ ಗಣೇಶ್ ಮನದ ಮಾತುಗಳನ್ನು ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ. ನಿರ್ಮಾಪಕರಾದ ನಿಶಾ ವೆಂಕಟ್ ಕೋಣಂಕಿ ಹಾಗೂ ವೆಂಕಟ್ ನಾರಾಯಣ್ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಗಣೇಶ್ ಹಾಗೂ ನಿರ್ದೇಶಕ ಸಿಂಪಲ್ ಸುನಿ ಜೋಡಿ ಮತ್ತೆ ಮ್ಯಾಜಿಕ್ ಮಾಡುತ್ತಾ ಎಂಬುದು ನವೆಂಬರ್ 26 ರಂದು ಗೊತ್ತಾಗಲಿದೆ.
ಇದನ್ನೂ ಓದಿ:ಅಂಧ ಮಕ್ಕಳ ಹಾವಭಾವ ನೋಡಿ ಆ ಪಾತ್ರಕ್ಕೆ ಜೀವ ತುಂಬಿದ್ದೇನೆ: 'ಸಖತ್' ಚಿತ್ರ ಕುರಿತು ನಿಶ್ವಿಕಾ ನಾಯ್ಡು ಮಾತು