ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಇದೀಗ ಕನ್ನಡ ಚಿತ್ರರಂಗದ ನಾಯಕನ ಸ್ಥಾನ ಪಡೆಯುವ ಮೂಲಕ ದೊಡ್ಡ ಜವಾಬ್ದಾರಿಯೊಂದನ್ನು ಹೊರಲು ಸಿದ್ಧರಾಗಿದ್ದಾರೆ. ಶಿವಣ್ಣನಿಗೆ ಚಿತ್ರರಂಗ ಮಾತ್ರವಲ್ಲ ಇತರ ಕ್ಷೇತ್ರಗಳಲ್ಲಿ ಕೂಡಾ ಒಳ್ಳೆಯ ಸ್ನೇಹಿತರಿದ್ದಾರೆ.
ಶಿವರಾಜ್ಕುಮಾರ್ ಮನೆಗೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ ಮಾಜಿ ಕ್ರಿಕೆಟ್ ಸ್ಟಾರ್ಗಳು...! - Venkatesh prasad congratulate Shivarajkumar
ಮಾಜಿ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ನಿನ್ನೆ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಮನೆಗೆ ಭೇಟಿ ನೀಡಿದ್ದಾರೆ. ಶಿವಣ್ಣ ಕನ್ನಡ ಚಿತ್ರರಂಗದ ನಾಯಕತ್ವ ವಹಿಸಿಕೊಂಡಿರುವುದಕ್ಕೆ ಅವರಿಗೆ ಅಭಿನಂದನೆ ತಿಳಿಸಿ ಬಂದಿದ್ದಾರೆ.
ಮಾಜಿ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ನಿನ್ನೆ ಶಿವಣ್ಣ ಮನೆಗೆ ಭೇಟಿ ನೀಡಿದ್ದಾರೆ. ಶಿವರಾಜ್ಕುಮಾರ್ ಕನ್ನಡ ಚಿತ್ರರಂಗದ ನಾಯಕತ್ವ ವಹಿಸಿಕೊಂಡ ಹಿನ್ನೆಲೆ ವೆಂಕಟೇಶ್ ಪ್ರಸಾದ್ ಹಾಗೂ ಮಾಜಿ ರಣಜಿ ಆಟಗಾರ ಅನಿಲ್ ಕುಮಾರ್ ಇಬ್ಬರೂ ನಾಗವಾರದ ಶಿವರಾಜ್ಕುಮಾರ್ ಮನೆಗೆ ಭೇಟಿ ನೀಡಿ ಶುಭ ಕೋರಿದ್ದಾರೆ. ಅಷ್ಟೇ ಅಲ್ಲ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವೆಂಕಟೇಶ್ ಪ್ರಸಾದ್ ಶಿವಣ್ಣ ಜೊತೆ ಕಾಲ ಕಳೆದಿದ್ದಾರೆ.
ವೆಂಕಟೇಶ್ ಪ್ರಸಾದ್ ಹಾಗೂ ಶಿವರಾಜ್ಕುಮಾರ್ ಮೊದಲಿನಿಂದಲೂ ಒಳ್ಳೆ ಗೆಳೆತನ ಹೊಂದಿದ್ದಾರೆ. ವೆಂಕಟೇಶ್ ಪ್ರಸಾದ್ ಬಳಿಕ ಮತ್ತೊಬ್ಬ ಕ್ರಿಕೆಟ್ ಆಟಗಾರ ವಿಜಯ್ ಭಾರದ್ವಾಜ್ ಕೂಡಾ ಶಿವರಾಜ್ಕುಮಾರ್ ಮನೆಗೆ ಬಂದು ಅಭಿನಂದನೆ ಹೇಳಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣನ ತಂಗಿ ಮಗ ಧೀರೆನ್ ರಾಮ್ಕುಮಾರ್ , ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಕೂಡಾ ಉಪಸ್ಥಿತರಿದ್ದರು. ಈ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.