ಕರ್ನಾಟಕ

karnataka

ETV Bharat / sitara

ಕನ್ನಡಕ್ಕೆ ಹಾಲಿವುಡ್ ಚಿತ್ರ ಡಬ್ ... 'ಫಾಸ್ಟ್​ ಆ್ಯಂಡ್ ಫ್ಯೂರಿಯಸ್' ಎರಡನೇ ಟ್ರೇಲರ್ ರಿಲೀಸ್ ​

ಕಳೆದ ತಿಂಗಳಷ್ಟೇ ಫಾಸ್ಟ್​ ಆ್ಯಂಡ್​ ಫ್ಯೂರಿಯಸ್​ ಚಿತ್ರದ ಮೊದಲ ಟ್ರೇಲರ್​ ಕನ್ನಡದಲ್ಲೇ ರಿಲೀಸ್ ಆಗಿತ್ತು. ಇದೀಗ ಎರಡನೇ ಟ್ರೇಲರ್​ ಕೂಡ ಕನ್ನಡದಲ್ಲೇ ಬಿಡುಗಡೆ ಮಾಡಿದೆ ಚಿತ್ರತಂಡ.

By

Published : May 9, 2019, 1:37 PM IST

ಚಿತ್ರಕೃಪೆ: ಇನ್​ಸ್ಟಾಗ್ರಾಂ

ಸ್ಯಾಂಡಲ್​​ವುಡ್​ನಲ್ಲಿ ಡಬ್​ ಚಿತ್ರಗಳಿಗೆ ಹಾದಿ ಸುಗಮವಾಗುತ್ತಿದೆ. ನಿರಂತರ ಹೋರಾಟದಿಂದಾಗಿ ಪರಭಾಷೆ ಚಿತ್ರಗಳು ಕನ್ನಡದಲ್ಲಿಯೇ ಡಬ್ ಆಗಿ ಬಿಡುಗಡೆಯಾಗುತ್ತಿವೆ.

ಹಾಲಿವುಡ್​ನ 'ಫಾಸ್ಟ್​ ಆ್ಯಂಡ್ ಫ್ಯೂರಿಯಸ್; ಹಾಬ್ಸ್ ಆ್ಯಂಡ್ ಶಾ' ಆವತರಣೆ ಚಿತ್ರ ಕನ್ನಡಕ್ಕೆ ಡಬ್ ಆಗುತ್ತಿರುವುದು ಎಲ್ಲರಿಗೂ ಗೊತ್ತು. ಕಳೆದ ತಿಂಗಳಷ್ಟೇ ಈ ಚಿತ್ರದ ಮೊದಲ ಟ್ರೇಲರ್​ ಕನ್ನಡದಲ್ಲೇ ರಿಲೀಸ್ ಆಗಿತ್ತು. ಇದೀಗ ಎರಡನೇ ಟ್ರೇಲರ್​ ಕೂಡ ಕನ್ನಡದಲ್ಲೇ ಬಿಡುಗಡೆ ಮಾಡಿದೆ ಚಿತ್ರತಂಡ.

ಯುನಿವರ್ಸಲ್ ಫಿಕ್ಚರ್ಸ್​ ಇಂಡಿಯಾ ಈ ಚಿತ್ರವನ್ನು ಕನ್ನಡಕ್ಕೆ ತರುತ್ತಿದೆ. ಈಗಾಗಲೇ ಎಂಟು ಸರಣಿಗಳಲ್ಲಿ ತೆರೆಕಂಡಿರುವ 'ಫಾಸ್ಟ್​ ಆ್ಯಂಡ್ ಫ್ಯೂರಿಯಸ್; ಹಾಬ್ಸ್ ಆ್ಯಂಡ್ ಶಾ' ಈಗ ಹೊಸ ಕಥೆಯೊಂದಿಗೆ ತೆರೆಗೆ ಬರುತ್ತಿದೆ. ಡ್ವೇನ್ ಜಾನ್ಸನ್, ಜೇಸನ್ ಸ್ಟಾಥಮ್, ಇಡಿರಿಸ್ ಎಲ್ಬಾ, ವನೆಸ್ಸಾ ಕಿರ್ಬಿ ಮತ್ತು ಹೆಲೆನ್ ಮಿರ್ರೆನ್ ನಟಿಸಿರುವ ಈ ಆ್ಯಕ್ಷನ್​ ಚಿತ್ರಕ್ಕೆ ಡೇವಿಡ್ ಲೀಚ್ ನಿರ್ದೇಶನ ಮಾಡಿದ್ದಾರೆ. 3.28 ನಿಮಿಷದ ಈ ಟ್ರೇಲರ್​ನಲ್ಲಿ ಮೈನವಿರೇಳಿಸುವ ಫೈಟ್​, ಆ್ಯಕ್ಷನ್ ಸೀನ್​ಗಳು ತುಂಬಿ ತುಳುಕುತ್ತಿವೆ. ಅದ್ಭುತವಾಗಿ ಮೂಡಿ ಬಂದಿರುವ ಟ್ರೇಲರ್ ಕನ್ನಡಿಗರ ಚಿತ್ತ ಸೆಳೆಯುತ್ತಿದೆ.

ABOUT THE AUTHOR

...view details