ದುಲ್ಕರ್ ಸಲ್ಮಾನ್, ಕಾಜಲ್ ಅಗರ್ವಾಲ್ ಮತ್ತು ಅದಿತಿ ರಾವ್ ಹೈದರಿ ತಾರಾಗಣದಲ್ಲಿರುವ ನಿರ್ದೇಶಕಿ ಬೃಂದಾ ಅವರ 'ಹೇ ಸಿನಾಮಿಕಾ' ಚಿತ್ರ ಮಾರ್ಚ್ 31ರಂದು ನೆಟ್‌ಫ್ಲಿಕ್ಸ್ ಮತ್ತು ಜಿಯೋ ಸಿನಿಮಾದಲ್ಲಿ ಬಿಡುಗಡೆಯಾಗಲಿದೆ. ಚಿತ್ರಮಂದಿರಗಳಲ್ಲಿ ಒಳ್ಳೆಯ ರೆಸ್ಪಾನ್ ಸಿಕ್ಕ ನಂತರ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಬಗ್ಗೆ ನಿರ್ದೇಶಕಿ ಬೃಂದಾ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ಜಿಯೋ ಮತ್ತು ನೆಟ್ಫ್ಲಿಕ್ಸ್ನಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿರುವ ಬಗ್ಗೆ ಬೃಂದಾ ಮಾಹಿತಿ ನೀಡಿದ್ದಾರೆ.
ದುಲ್ಕರ್ ಸಲ್ಮಾನ್ ಅಭಿನಯದ ಸಿನಿಮಾ 'ಹೇ ಸಿನಾಮಿಕ' ಮಾ.31ಕ್ಕೆ ಒಟಿಟಿಯಲ್ಲಿ ರಿಲೀಸ್ - entertainment news
ಮಾರ್ಚ್ 31ರಂದು ದುಲ್ಕರ್ ಸಲ್ಮಾನ್, ಕಾಜಲ್ ಅಗರ್ವಾಲ್ ಮತ್ತು ಅದಿತಿ ರಾವ್ ಹೈದರಿ ತಾರಾಗಣದಲ್ಲಿರುವ ನಿರ್ದೇಶಕಿ ಬೃಂದಾ ಅವರ 'ಹೇ ಸಿನಾಮಿಕಾ' ಸಿನಿಮಾ ನೆಟ್‌ಫ್ಲಿಕ್ಸ್ ಮತ್ತು ಜಿಯೋ ಸಿನಿಮಾದಲ್ಲಿ ಬಿಡುಗಡೆಯಾಗಲಿದೆ.
ದುಲ್ಕರ್ ಸಲ್ಮಾನ್ ಸಿನಿಮಾ ಹೇ ಸಿನಾಮಿಕ ಮಾರ್ಚ್ 31ಕ್ಕೆ ಒಟಿಟಿಯಲ್ಲಿ
'ಹೇ ಸಿನಾಮಿಕಾ' ಕಥೆಯು ಹವಾಮಾನ ವಿಜ್ಞಾನಿಯಾದ ಮೌನ (ಅದಿತಿ) ಸುತ್ತ ಸುತ್ತುತ್ತದೆ. ಯಾಝನ್ (ದುಲ್ಕರ್) ಅವರೊಂದಿಗೆ ಪ್ರೀತಿಯಲ್ಲಿ ಬೀಳುವ ಮೌನ ಅವರ ಜೀವನದಲ್ಲಿ ಒಂದೆರಡು ವರ್ಷಗಳ ನಂತರ ಏನಾಗುತ್ತದೆ. ಮಲರ್ವಿಜಿ (ಕಾಜಲ್) ಆಗಮನದ ನಂತರ ಅವರ ಜೀವನದಲ್ಲಿ ಹೇಗೆ ಅನಿರೀಕ್ಷಿತ ತಿರುವುಗಳು ಉಂಟಾಗುತ್ತವೆ ಎಂಬುದನ್ನು ಕಥೆ ಹೇಳುತ್ತದೆ. '96' ಸಿನಿಮಾ ಖ್ಯಾತಿಯ ಗೋವಿಂದ್ ವಸಂತ ಅವರು 'ಹೇ ಸಿನಾಮಿಕಾ' ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
ಇದನ್ನೂ ಓದಿ:ಮಹಿಳೆಯರು ಟಾರ್ಗೆಟ್ ಆಗುತ್ತಿದ್ದಾರೆ.. ಹಿಜಾಬ್ ಪರ ಭುವನ ಸುಂದರಿ ಹರ್ನಾಜ್ ಸಂಧು ಧ್ವನಿ..