‘ಪ್ರೇಮಂ ಪೂಜ್ಯಂ’ ಮುದ್ದಾದ ಶೀರ್ಷಿಕೆ ಹಾಗೂ ಟ್ರೈಲರ್ನಿಂದಲೇ ಕನ್ನಡ ಚಿತ್ರರಂಗ ಅಲ್ಲದೆ ಪರಭಾಷೆಯವರು ತಿರುಗಿ ನೋಡುವಂತೆ ಮಾಡುತ್ತಿರುವ ಚಿತ್ರ. ನೆನೆಪಿರಲಿ ಪ್ರೇಮ್ ನಟನೆಯ 25ನೇ ಚಿತ್ರ ಇದಾಗಿದ್ದು, ಹಬ್ಬದ ಪ್ರಯುಕ್ತ ಬಿಡುಗಡೆಯಾಗಿರುವ ಟ್ರೈಲರ್ಗೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ.
ಶುಕ್ರವಾರ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿರುವ ನಿರ್ದೇಶಕ ರಾಘವೇಂದ್ರ ಬಿ.ಎಸ್, ಈ ಚಿತ್ರದ ಕಥೆಯನ್ನ ಮೊದಲು ಕೇಳಿದ್ದು ರೆಬೆಲ್ ಸ್ಟಾರ್ ಅಂಬರೀಶ್ ಅವರು. ಅಂತಹ ಮೇರು ನಟ 4 ಗಂಟೆಗಳ ಕಾಲ ಕಥೆ ಕೇಳಿ, ನಾನೇ ನಿಂತು ಸಿನಿಮಾ ಮಾಡಿ ಕೊಡುತ್ತೇನೆ ಎಂದಿದ್ದರು. ಅವರಿಗೆ ಈ ಸಿನಿಮಾ ಅರ್ಪಿಸುತ್ತೇನೆ ಎಂದಿದ್ದಾರೆ.