ಕನ್ನಡ ಚಿತ್ರರಂಗದ ಮೇರುನಟ ಡಾ.ರಾಜ್ಕುಮಾರ್ ಕುಟುಂಬದಿಂದ ಮಕ್ಕಳು ನಟರಾಗಿ ಸ್ಯಾಂಡಲ್ವುಡ್ನಲ್ಲಿ ಹೆಸರು ಗಳಿಸಿದ್ದಾರೆ. ಆದರೆ, ರಾಜ್ ಕುಟುಂಬದಿಂದ ನಾಯಕಿಯಾಗಿ ಯಾರೊಬ್ಬರೂ ಬೆಳ್ಳಿ ತೆರೆಗೆ ಬಂದಿರಲಿಲ್ಲ. ಇದೀಗ ರಾಜ್ಕುಮಾರ್ ಮೊಮ್ಮಗಳು ಧನ್ಯಾ ರಾಮ್ಕುಮಾರ್ ಮೊದಲ ನಾಯಕಿಯಾಗಿ ರಾಜ್ ಕುಟುಂಬವನ್ನ ಪ್ರತಿನಿಧಿಸುತ್ತಿದ್ದಾರೆ.
ಈಗಾಗಲೇ ಧನ್ಯಾ ರಾಮ್ಕುಮಾರ್ ನಟನೆಯ ‘ನಿನ್ನ ಸನಿಹಕೆ’ ಚಿತ್ರದ ಟ್ರೈಲರ್ ಸಹ ರಿಲೀಸ್ ಆಗಿದ್ದು, ಸಿನಿ ರಸಿಕರಿಂದ ಮೆಚ್ಚುಗೆ ಪಡೆದಿದೆ. ಚಿತ್ರತಂಡ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸಿದ್ದು, ಅದರಂತೆ ಅಕ್ಟೋಬರ್ 8ರಂದು ಸಿನಿಪ್ರಿಯರ ಮುಂದೆ ಬರಲು ರೆಡಿಯಾಗಿದೆ.
ಧನ್ಯಾ ರಾಮ್ಕುಮಾರ್ಗೆ ಶಿವಣ್ಣ ರಾಘಣ್ಣ ಆ್ಯಕ್ಟಿಂಗ್ ಟಿಪ್ಸ್ ಕೊಡ್ತಿದ್ರಂತೆ ಪೂರ್ಣಿಮಾ, ರಾಮ್ಕುಮಾರ್ ಮಗಳಾದ ಧನ್ಯಾ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇತ್ತ ದೊಡ್ಮನೆಯಿಂದ ಧನ್ಯಾ ನಟನೆ ಕುರಿತು ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ.
ಧನ್ಯಾ ರಾಮ್ಕುಮಾರ್ ಮಾತನಾಡಿ, ಇವತ್ತು ತಾತ, ಅಜ್ಜಿ ಇದ್ದಿದ್ದರೆ ತುಂಬಾನೇ ಸಂತೋಷ ಪಡ್ತಾ ಇದ್ದರು. ನಾನು ತುಂಬಾನೇ ಮಿಸ್ ಮಾಡಿಕೊಳ್ಳುತ್ತೀನಿ. ಜೊತೆಗೆ ಶೂಟಿಂಗ್ ಹೋಗುವ ಮೊದಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು ಅಂತ ಶಿವಣ್ಣ, ರಾಘಣ್ಣ ಹೇಳಿಕೊಡುತ್ತಿದ್ದರು. ರಾತ್ರಿ ಬೇಗ ಮಲಗಬೇಕು, ಡಬ್ಬಿಂಗ್ ಹೋಗುವ ಮುಂಚೆ ಏನನ್ನೂ ಕುಡಿಯಬಾರದು, ಬಿಸಿ ನೀರು ಕುಡಿಯಬೇಕು ಹೀಗೆಲ್ಲಾ ಸಲಹೆ ನೀಡಿದ್ದರು ಎಂದಿದ್ದಾರೆ.
ಓದಿ:ದೊಡ್ಡ ಚಿತ್ರಗಳು ಒಂದೇ ದಿನ ಬಿಡುಗಡೆಯಿಂದ ನಮ್ಮ ಸಿನಿಮಾಗೆ ತೊಂದರೆ - ನಟ ಸೂರಜ್, ಧನ್ಯಾ