ಮೂರು ನಿಮಿಷಗಳ 'ಡಿಯರ್ ಕಾಮ್ರೆಡ್' ಟ್ರೇಲರ್ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟುಗೊಳಿಸಿದೆ. ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ಕೆಮಿಸ್ಟ್ರಿ ಫುಲ್ ವರ್ಕೌಟ್ ಆಗಿರುವುದು ಟ್ರೇಲರ್ ನೋಡಿದ್ರೆ ಗೊತ್ತಾಗುತ್ತೆ. ಚಿತ್ರತಂಡ ಟ್ರೇಲರ್ನಲ್ಲಿ ಚಿತ್ರಕಥೆಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ. ಈ ಚಿತ್ರದಲ್ಲಿ ಕೊಡಗಿನ ಕುವರಿ ರಶ್ಮಿಕಾ ಕ್ರಿಕೆಟರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಮೊದಲು ಬಿಡುಗಡೆಯಾಗಿದ್ದ ಟೀಸರ್ನಲ್ಲಿರುವಂತೆ ಇದರಲ್ಲಿಯೂ ಕೂಡ ಲಿಪ್ ಲಾಕ್ ಸೀನಗಳು ಗಮನ ಸೆಳೆಯುತ್ತಿವೆ.
ಸಖತ್ ಆಗಿದೆ 'ಡಿಯರ್ ಕಾಮ್ರೆಡ್' ಟ್ರೇಲರ್ - ರಶ್ಮಿಕಾ ಮಂದಣ್ಣ
ಗೀತ ಗೋವಿಂದಂ ಜೋಡಿ ಮತ್ತೆ ಒಂದಾಗಿ ನಟಿಸಿರುವ 'ಡಿಯರ್ ಕಾಮ್ರೆಡ್' ಸಿನಿಮಾದ ಟ್ರೇಲರ್ ಇಂದು ರಿಲೀಸ್ ಆಗಿದೆ.
ಡಿಯರ್ ಕಾಮ್ರೆಡ್
ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟಿಸಿರುವ ಈ ಸಿನಿಮಾ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ಡಿಯರ್ ಕಾಮ್ರೆಡ್ ಶೀಘ್ರದಲ್ಲಿ ತೆರೆಗೆ ಬರಲಿದೆ.