ದಚ್ಚು ಅಭಿಮಾನಿಗಳಷ್ಟೇ ಅಲ್ಲದೇ ಕನ್ನಡ ಸಿನಿಪ್ರಿಯರ ಮೊಬೈಲ್ನ ಸಾಂಗ್ ಆಲ್ಬಂನಲ್ಲಿ ಬಸಣ್ಣಿ ಮೊದಲ ಸ್ಥಾನದಲ್ಲಿದ್ದಾಳೆ. ನಿತ್ಯ ನಾಲ್ಕಾರು ಬಾರಿಯಾದ್ರು ಬಸಣ್ಣಿನ ನೆನಪಿಸಿಕೊಳ್ಳುತ್ತಿರುತ್ತಾರೆ ದಾಸನ ಹುಡುಗರು. ಇನ್ನು ಯಾವುದೇ ಸಭೆ-ಸಮಾರಂಭಗಳಲ್ಲಂತೂ ಬಸಣ್ಣಿ ಪ್ರತ್ಯಕ್ಷವಾಗುತ್ತಾಳೆ.
ಹೋಳಿ ಹಬ್ಬ ರಂಗೇರಿಸಿದ 'ಬಸಣ್ಣಿ'... ಯಜಮಾನ ಹಾಡಿಗೆ ಬೆಣ್ಣೆ ನಗರಿಯಲ್ಲಿ ಡ್ಯಾನ್ಸ್ ಝಲಕ್ - ಕುಣಿದ ಫ್ಯಾನ್ಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಯಜಮಾನ ಚಿತ್ರದ ಎಲ್ಲ ಸಾಂಗ್ಸ್ ಸೂಪರ್ ಹಿಟ್ ಆಗಿವೆ. ಅದರಲ್ಲೂ 'ಬಸಣ್ಣಿ ಬಾ' ಸಾಂಗ್ ಮೇಲೆ ಪಡ್ಡೆ ಹುಡುಗರ ಲವ್ ಸ್ವಲ್ಪ ಜಾಸ್ತಿನೇ.
ಬಸಣ್ಣಿ ಸಾಂಗ್ಗೆ ಕುಣಿದ ದಾವಣಗೆರೆ ಜನ
ಇಂದು ಬೆಣ್ಣೆದೋಸೆ ನಗರಿ ದಾವಣಗೆರೆಯಲ್ಲಿ ಕಲರ್ಫುಲ್ ಹೋಳಿ ಹಬ್ಬ ನಡೆಯಿತು. ಎಲ್ಲರೂ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಈ ಸಡಗರಲ್ಲಿ ದಾವಣಗೆರೆ ಜನರು ಬಸಣ್ಣಿಯ ಆರಾಧನೆ ಮಾಡಿದ್ರು. ಡಿಜೆಯಲ್ಲಿ ಈ ಸಾಂಗ್ ಪ್ಲೇ ಮಾಡಿ ಸಖತ್ ಸ್ಟೆಪ್ ಹಾಕಿದ್ರು. ಒಂದೇ ಕಡೆ ನೆರೆದಿದ್ದ ಸಾವಿರಾರು ಜನರು ಬಸಣ್ಣಿ ಬಾ ಸಾಂಗ್ಗೆ ಕೇಕೆ ಹಾಕಿ ಕುಣಿದು ಕುಪ್ಪಳಿಸಿದರು. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.