ಕರ್ನಾಟಕ

karnataka

ETV Bharat / sitara

ಓದಿನ ಜೊತೆ ಚಿತ್ರಕಥೆ ಬರೀತಿದ್ದಾರಂತೆ ಉಪ್ಪಿ ಮಗಳು ಐಶ್ವರ್ಯಾ! - ಐಶ್ವರ್ಯಾ

'ದೇವಕಿ' ಚಿತ್ರದ ನಂತರ ನಾನು ಕೂಡ ಆ್ಯಕ್ಟರ್ ಆಗ್ತೀನಿ ಎನ್ನುತ್ತಿದ್ದ ಉಪ್ಪಿ ಮಗಳು ಈಗ ಸ್ಕ್ರಿಪ್ಟ್ ರೈಟಿಂಗ್‌ನಲ್ಲಿ ಆಸಕ್ತಿ ತೋರಿಸಿದ್ದಾರೆ.

ಐಶ್ವರ್ಯಾ
ಐಶ್ವರ್ಯಾ

By

Published : Aug 19, 2020, 1:11 AM IST

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಮಗಳು ಐಶ್ವರ್ಯ 'ದೇವಕಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಅಮ್ಮನ ಜೊತೆ ತೆರೆ ಹಂಚಿಕೊಂಡು ಸೈ ಎನಿಸಿಕೊಂಡಿದ್ದರು. ಇವರ ಆ್ಯಕ್ಟಿಂಗ್ ಕೌಶಲ್ಯ ನೋಡಿದ ಸಿನಿ ಪಂಡಿತರು ಭವಿಷ್ಯದಲ್ಲಿ ಈಕೆ ನಾಯಕಿ ಆಗೋದ್ರಲ್ಲಿ ಸಂದೇಹವಿಲ್ಲ ಎಂದೇ ಹೇಳುತ್ತಿದ್ದರು.

ಮಗಳು ಐಶ್ವರ್ಯಾ ಬಗ್ಗೆ ಉಪೇಂದ್ರ ಮಾತು

ಈ ಚಿತ್ರದ ನಂತರ ಐಶ್ವರ್ಯ ನಟಿ ಆಗ್ತಾರೆ ಎಂದು ಅವರ ಮನೆಯವರು ಕೂಡಾ ಅಂದುಕೊಂಡಿದ್ದರಂತೆ. ಆದ್ರೀಗ ಈ ಊಹೆಗಳನ್ನು ಉಲ್ಟಾ ಮಾಡಿರುವ ಐಶ್ವರ್ಯ, ಅಪ್ಪ ಹಾದಿಯಲ್ಲೇ ಸಾಗುವ ಮುನ್ಸೂಚನೆ ಕೊಟ್ಟಿದ್ದಾರೆ‌. ಉಪ್ಪಿ ಹೇಳುವ ಪ್ರಕಾರ, ಮಗಳು ಸದ್ಯ ಶಿಕ್ಷಣದ ಜೊತೆಗೆ ಚಿತ್ರಕಥೆ ಬರೆಯೋದ್ರಲ್ಲಿ ಬ್ಯುಸಿ ಅಂತೆ‌. ಜೊತೆಗೆ ವರ್ಲ್ಡ್ ವೈಡ್ ಅವಳ ಸ್ಕ್ರಿಪ್ಟ್ ಓದೋಕೆ 17 ಸಾವಿರ ಫಾಲೋವರ್ಸ್ ಇದ್ದಾರೆ ಎನ್ನುತ್ತಾರೆ.

ಐಶ್ವರ್ಯಾ

'ದೇವಕಿ' ಚಿತ್ರದ ನಂತರ ನಾನು ಕೂಡ ಆ್ಯಕ್ಟರ್ ಆಗ್ತೀನಿ ಎನ್ನುತ್ತಿದ್ದ ಇವರೀಗ ಸ್ಕ್ರಿಪ್ಟ್ ರೈಟರ್ ಆಗಿದ್ದಾರೆ. ಒಂದು ವೇಳೆ ಐಶ್ವರ್ಯಾ ಅಪ್ಪನ ಹಾದಿಯಲ್ಲಿಯೇ ಸಾಗಿ ಸ್ಕ್ರಿಪ್ಟ್ ರೈಟರ್ ಕಮ್ ಡೈರೆಕ್ಟರ್ ಆದ್ರೆ ಮತ್ತಷ್ಟು ವಿಭಿನ್ನ ಚಿತ್ರಗಳು ಸ್ಯಾಂಡಲ್‌ವುಡ್‌ನಲ್ಲಿ ಬರೋದು ಖಾತ್ರಿ ಅಂತಿದ್ದಾರೆ ಗಾಂಧಿನಗರದ ಮಂದಿ.

ABOUT THE AUTHOR

...view details