ಇಷ್ಟು ದಿನಗಳ ಕಾಲ ಚುನಾವಣೆ ಎಂಬ ಮಹಾಯುದ್ಧದಲ್ಲಿ ಬ್ಯುಸಿಯಾಗಿದ್ದ ಸ್ಯಾಂಡಲ್ವುಡ್ನ ಸರದಾರ, ನಿನ್ನೆ ಮೈಸೂರಿನಲ್ಲಿರುವ ಸ್ನೇಹಿತ ಇಫ್ತೆಕರ್ ಎಂಬುವರ ಮನೆಯಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಕಾಣಿಸಿಕೊಳ್ಳುವ ಮೂಲಕ ಸರಳತೆಗೆ ಸಾಕ್ಷಿಯಾದರು. ಕನ್ನಡ ಚಿತ್ರರಂಗದ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಅಂದ್ರೆ ಎಲ್ಲಿರಿಗೂ ಅಚ್ಚುಮೆಚ್ಚು. ಈ ಇಫ್ತಾರ್ ಕೂಟ ಕರಿಯನ ಸರಳತೆಗೆ ಮತ್ತೊಂದು ಸಾಕ್ಷಿಯಾಯ್ತು.
ದಿಲ್‌ಗೆದ್ದ ಡಿ-ಬಾಸ್! ಇಫ್ತಾರ್ ಕೂಟದಲ್ಲಿ ಸಾಮರಸ್ಯ ಸಾರಿದ ಸ್ಯಾಂಡಲ್ವುಡ್ನ ಸರದಾರ.. - Darshan
ಮಂಡ್ಯ ಚುನಾವಣಾ ಅಖಾಡಲ್ಲಿ ತಮ್ಮದೇಯಾದ ಖದರ್ ತೋರಿಸಿದ್ದ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್, ಜಾತಿ ಮತ್ತು ಭೇದ ಭಾವ ಮರೆತು ನಿನ್ನೆ ತನ್ನ ಗೆಳೆಯನ ಇಫ್ತಾರ್ ಕೂಟದಲ್ಲಿ ಭಾಗಿಯಾಗಿ ಸಾಮರಸ್ಯದ ಬೆಸುಗೆ ಹೆಚ್ಚಿಸಿದರು.
ಗೆಳೆಯನ ಇಫ್ತಾರ್ ಕೂಟದಲ್ಲಿ ಭಾಗಿಯಾಗಿ ಸಾಮರಸ್ಯದ ಬೆಸುಗೆ ಹೆಚ್ಚಿಸಿದ ದರ್ಶನ್
ಸದ್ಯ ರಾಬರ್ಟ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದ ಅವರು ಬಿಡುವ ಮಾಡಿಕೊಂಡು ಗೆಳೆಯನ ಜೊತೆ ಕಾಲ ಕಳೆದರು. ಇಫ್ತಾರ್ ಕೂಟದಲ್ಲಿ ದರ್ಶನ್ ಟೋಪಿ ಹಾಕಿಕೊಳ್ಳುವ ಮೂಲಕ ನಾನೂ ಕೂಡ ನಿಮ್ಮಲ್ಲಿ ಒಬ್ಬ ಎಂಬುದನ್ನ ತೋರಿಸಿಕೊಂಡರು.