ನೃತ್ಯ ಹಾಗೂ ಸಿನಿಮಾ ನಿರ್ದೇಶಕ ರೆಮೊ ಡಿಸೋಜಾಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನ ಕೊಕಿಲಾಬೇನ್ ಆಸ್ಪತ್ರೆಯಲ್ಲಿ ರೆಮೋ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸಿನಿಮಾ, ನೃತ್ಯ ನಿರ್ದೇಶಕ ರೆಮೊಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು - Director Remo D'Souza In ICU
ನೃತ್ಯ ಹಾಗೂ ಸಿನಿಮಾ ನಿರ್ದೇಶಕ ರೆಮೊ ಡಿಸೋಜಾಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಖ್ಯಾತ ನಿರ್ದೇಶಕ ರೆಮೊಗೆ ತೀವ್ರ ಹೃದಯಾಘಾತ
ರೆಮೊ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯರು, ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. 24 ಗಂಟೆಗಳ ಕಾಲ ಏನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ರೆಮೊ ಅವರು ಸ್ಟ್ರೀಟ್ ಡಾನ್ಸರ್, ಎಬಿಸಿಡಿ, ಎಬಿಸಿಡಿ 2, ದಿ ಫ್ಲೈಯಿಂಗ್ ಜಟ್, ರೇಸ್ 3 ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಲ್ಲದೇ ಡಾನ್ಸ್ ರಿಯಾಲಿಟಿ ಶೋ ಗಳ ತೀರ್ಪುಗಾರರಾಗಿಯೂ ಕೆಲಸ ಮಾಡಿದ್ದಾರೆ. ಡಾನ್ಸ್, ಝಲಕ್ ದಿಕ್‌ಲಾಜಾ, ಡಾನ್ಸ್ ಪ್ಲಸ್ ಡಾನ್ಸ್ ಶೋ ಗಳಿಗೆ ಜಡ್ಜ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.