ಕರ್ನಾಟಕ

karnataka

ETV Bharat / sitara

ಈ ಚಿತ್ರದಲ್ಲಿರುವ ಅಣ್ಣ- ತಂಗಿ ಇಂದು ಕನ್ನಡದ ದೊಡ್ಡ​​ ತಾರೆಯರು!

ಈ ಕಪ್ಪು ಬಿಳುಪು ಚಿತ್ರದಲ್ಲಿರುವ ಪುಟ್ಟ ಸಹೋದರ - ಸಹೋದರಿ ಇಂದು ಕನ್ನಡ ಚಿತ್ರರಂಗದ ಕಣ್ಮಣಿಗಳು. ಹಾಗಾದರೆ ಇವರು ಯಾರು ಎಂಬುದನ್ನು ಗೆಸ್ ಮಾಡಿ.

By

Published : Jun 28, 2019, 12:58 PM IST

ಚಿತ್ರಕೃಪೆ: ಇನ್​ಸ್ಟಾಗ್ರಾಂ

ಈ ಮೇಲಿನ ಬ್ಲ್ಯಾಕ್​ ಆ್ಯಂಡ್​ ವೈಟ್​ ಚಿತ್ರದಲ್ಲಿರುವ ಅಣ್ಣ-ತಂಗಿ ಇಂದು ಕನ್ನಡ ಚಿತ್ರರಂಗದಲ್ಲಿ ದೊಡ್ಡ ನಟ-ನಟಿಯಾಗಿ ವಿಜೃಂಭಿಸುತ್ತಿದ್ದಾರೆ. ಕಲಾವಿದರ ಕುಟುಂಬದಲ್ಲೇ ಜನಿಸಿದ ಈ ಸಹೋದರ - ಸಹೋದರಿ ಬೆಳೆದು ದೊಡ್ಡವರಾಗಿ ಮಿನುಗುವ ತಾರೆಯರಾಗಿದ್ದಾರೆ. ಹಾಗಾದರೆ ಈ ಪಟದಲ್ಲಿರುವವರು ಯಾರು ಅಂತಾ ಗೊತ್ತಾಯಿತಾ?

ತಂಗಿಯ ಹೆಗಲ ಮೇಲೆ ತನ್ನ ಕೈಗಳನ್ನಿರಿಸಿ ಕ್ಯಾಮರಾ ನೋಡುತ್ತಿರುವುದು ಸ್ಯಾಂಡಲ್​​ವುಡ್​ನ ಅಧ್ಯಕ್ಷ ಶರಣ್​. ಅಣ್ಣನೊಂದಿಗೆ ಚಂದದ ನಗು ಬೀರುತ್ತ ಕುಳಿತಿರುವುದು ನಟಿ ಶೃತಿ. ಇದು ಶರಣ್ ಹಾಗೂ ಶೃತಿ ಅವರ ಬಾಲ್ಯದ ಫೋಟೋ. ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ, ಎಲ್ಲರೂ ಭಾವಿಸಿದಂತೆ ಶರಣ್ ಅವರು ಶೃತಿಯವರ ತಮ್ಮನಲ್ಲ. ಬದಲಾಗಿ ಹಿರಿಯ ಅಣ್ಣ. ಇವರೇ ಮನೆಗೆ ದೊಡ್ಡವರು. ಈ ವಿಚಾರ ಮೊನ್ನೆ ನಡೆದ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ರಿವೀಲ್ ಆಯಿತು.

ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಶರಣ್ -ಶೃತಿ

ಕರ್ಪೂರದ ಗೊಂಬೆ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶರಣ್​, ತಮ್ಮ 100 ನೇ ಚಿತ್ರ ರ‍್ಯಾಂಬೊ ಮೂಲಕ ಪೂರ್ಣ ಪ್ರಮಾಣದ ನಟರಾದರು. ಅಧ್ಯಕ್ಷ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಫುಲ್​​ಪ್ಲೆಡ್ಜ್​ ನಾಯಕನಾಗಿ ಕಾಣಿಸಿಕೊಂಡಿರುವ ಅವರು ಸದ್ಯ ಅಧ್ಯಕ್ಷ ಇನ್ ಅಮೆರಿಕ ಚಿತ್ರದ ರಿಲೀಸ್​ಗೆ ಎದುರು ನೋಡುತ್ತಿದ್ದಾರೆ. ಇತ್ತ ನಟಿ ಶೃತಿ ಅವರು ಕೂಡ ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ತಮ್ಮದೆ ಅಭಿಮಾನಿಗಳ ವರ್ಗ ಸೃಷ್ಟಿಸಿಕೊಂಡಿದ್ದಾರೆ.

ABOUT THE AUTHOR

...view details