ಕರ್ನಾಟಕ

karnataka

ETV Bharat / sitara

ಅಪ್ಪನಂತೆ ಮಗ: ವಿನೀಶ್​​​​​​​ಗೆ ಹಾಲು ಕರೆಯುವುದನ್ನು ಕಲಿಸಿದ ದರ್ಶನ್​​​​​

ಮೈಸೂರಿನ ಫಾರಂ ಹೌಸ್​​ನಲ್ಲಿ ಬಿಡುವಿನ ವೇಳೆ ಸಮಯ ಕಳೆಯುತ್ತಿರುವ ನಟ ದರ್ಶನ್ ತಮ್ಮ ಮಗ ವಿನೀಶ್​​​​ಗೆ ಹಾಲು ಕರೆಯುವುದನ್ನು ಹೇಳಿಕೊಡುತ್ತಿದ್ದಾರೆ.

ಮಗನಿಗೆ ಹಾಲು ಹಿಂಡುವುದನ್ನು ಹೇಳಿಕೊಡುತ್ತಿರುವ ದರ್ಶನ್​

By

Published : Apr 29, 2019, 3:15 PM IST

Updated : Apr 29, 2019, 3:52 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೇವಲ ಸಿನಿಮಾ ನಟ ಮಾತ್ರವಲ್ಲ. ಪ್ರಾಣಿಪ್ರಿಯ, ಪರಿಸರ ಪ್ರೇಮಿ ಕೂಡಾ. ಮೊನ್ನೆಯಷ್ಟೇ ಹೊಸ ಲ್ಯಾಂಬೋರ್ಗಿನಿ ಕಾರು ಖರೀದಿಸಿ ದರ್ಶನ್ ಮತ್ತೆ ತಮ್ಮ ಕಾರ್ ಕ್ರೇಜ್ ಬಗ್ಗೆ ಸುದ್ದಿಯಾಗಿದ್ದರು.

ಮಗನಿಗೆ ಹಾಲು ಹಿಂಡುವುದನ್ನು ಹೇಳಿಕೊಡುತ್ತಿರುವ ದರ್ಶನ್​

ಇನ್ನು ದರ್ಶನ್ ತಾವು ಬಿಡುವಾದಾಗಲೆಲ್ಲಾ ತಮ್ಮ ಫಾರಂ ಹೌಸ್​ನಲ್ಲಿ ಪ್ರಾಣಿಗಳ ಆರೈಕೆ ಮಾಡುತ್ತಾ ಕಾಲ ಕಳೆಯುತ್ತಾರೆ. ಮಗ ವಿನೀಶ್​ಗೆ ಆ್ಯಕ್ಟಿಂಗ್ ಮಾತ್ರವಲ್ಲ ಹಾಲು ಹಿಂಡುವುದು ಹೇಗೆ ಅಂತ ಕೂಡಾ ದಚ್ಚು ಹೇಳಿಕೊಡುತ್ತಿದ್ದಾರೆ. ವಿನೀಶ್​ಗೆ ಈಗ ಬೇಸಿಗೆ ರಜೆ ಇದ್ದು, ದರ್ಶನ್ ಫಾರಿನ್ ಟ್ರಿಪ್ ಅಂತೆಲ್ಲಾ ಹೋಗದೆ ಮೈಸೂರಿನ ತಮ್ಮ ಫಾರಂ ಹೌಸ್​​ನಲ್ಲಿ ರೆಸ್ಟ್​​​ ಮಾಡುತ್ತಿದ್ದಾರೆ. ಇನ್ನು ದರ್ಶನ್​ ತಮ್ಮ ಮಗ ವಿನೀಶ್​​​​ಗೆ ಕೂಡಾ ತಮ್ಮಂತೆಯೇ ಹಾಲು ಹಿಂಡುವುದನ್ನು ಹೇಳಿಕೊಡುತ್ತಿದ್ದಾರೆ. ಮಗ ಕೂಡಾ ಶ್ರದ್ಧೆಯಿಂದ ಅಪ್ಪ ಹೇಳಿಕೊಟ್ಟ ಹಾಗೆ ಕಲಿಯುತ್ತಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ದಚ್ಚು ಅಭಿಮಾನಿಗಳು ವಿಡಿಯೋ ನೋಡಿ ಖುಷಿ ವ್ಯಕ್ತಪಡಿಸುತ್ತಿದ್ದಾರೆ.

Last Updated : Apr 29, 2019, 3:52 PM IST

For All Latest Updates

TAGGED:

ABOUT THE AUTHOR

...view details