ಕರ್ನಾಟಕ

karnataka

By

Published : Oct 16, 2019, 8:12 PM IST

Updated : Oct 16, 2019, 9:02 PM IST

ETV Bharat / sitara

ಅಣ್ಣಾವ್ರ ಅಂಗಿ ನಂತರ ಇದೀಗ ದರ್ಶನ್ ಫೋಟೋ ಶರ್ಟ್​ಗೆ ಫುಲ್‌ ಡಿಮ್ಯಾಂಡ್‌..

ಕೋಟ್ಯಂತರ ಅಭಿಮಾನಿ ಬಳಗ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಫೋಟೋಗಳಿರುವ ಶರ್ಟ್ ಮಾರುಕಟ್ಟೆಗೆ ಬಂದಿದೆ. ಈ ಶರ್ಟ್ ಮೇಲೆ ದರ್ಶನ್ ನಟಿಸಿರುವ ಅವರ ವಿವಿಧ ಸಿನಿಮಾಗಳ ಫೋಟೋಗಳಿವೆ. ಯಜಮಾನನ ಅಭಿಮಾನಿಗಳು ಈ ಶರ್ಟ್​ಗಳನ್ನು ಕೊಳ್ಳುತ್ತಿದ್ದಾರೆ.

ದರ್ಶನ್ ಫೋಟೋ ಶರ್ಟ್

ವರನಟ ಡಾ. ರಾಜ್​​​​​​ಕುಮಾರ್ ಹಾಗೂ ಶಿವರಾಜ್​​​​​​​​​​​ಕುಮಾರ್ ಭಾವಚಿತ್ರ ಹೊಂದಿರುವ ಶರ್ಟ್​ಗಳು, ಮಾರ್ಕೆಟ್​​​​​​​​​​ನಲ್ಲಿ ಹವಾ ಸೃಷ್ಟಿಸಿವೆ‌. ಅಣ್ಣಾವ್ರ ಮೊಮ್ಮಗ ಧೀರೆನ್ ರಾಮ್​​ಕುಮಾರ್ ತಮ್ಮ ತಾತ ಹಾಗೂ ಸೋದರ ಮಾವನ ಫೋಟೋಗಳಿರುವ ಶರ್ಟ್ ಧರಿಸಿ ಫೋಸ್‌ ಕೊಟ್ಟು ಆ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿದ್ದರು.

ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ದರ್ಶನ್ ಫೋಟೋ ಇರುವ ಶರ್ಟ್​ಗಳು..

ಇದೀಗ ಸ್ಯಾಂಡಲ್​​​​​​​ವುಡ್​​​ನ ಮತ್ತೊಬ್ಬ ಸ್ಟಾರ್ ನಟನ ಶರ್ಟ್ ಮಾರ್ಕೆಟ್​​​​ಗೆ ಲಗ್ಗೆ ಇಟ್ಟಿವೆ. ಕೋಟ್ಯಂತರ ಅಭಿಮಾನಿ ಬಳಗ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಪೋಟೋ ಇರುವ ಶರ್ಟ್ ಮಾರುಕಟ್ಟೆಗೆ ಬಂದಿದೆ. ಈ ಶರ್ಟ್ ಮೇಲೆ ದರ್ಶನ್ ನಟಿಸಿರುವ ಅವರ ವಿವಿಧ ಸಿನಿಮಾಗಳ ಫೋಟೋಗಳಿವೆ. ಚಕ್ರವರ್ತಿ, ಬೃಂದಾವನ ಸಿನಿಮಾಗಳ ಕ್ಲಾಸ್ ಹಾಗೂ ಮಾಸ್ ಲುಕ್ ಇರುವ ಶರ್ಟ್​ಗಳು ಮಾರುಕಟ್ಟೆಗೆ ಬಂದಿವೆ. ಯಜಮಾನನ ಅಭಿಮಾನಿಗಳು ಈ ಶರ್ಟ್​ಗಳನ್ನು ಕೊಳ್ಳುತ್ತಿದ್ದಾರೆ. ಆನ್​​​ಲೈನ್​​​ನಲ್ಲಿ ಕೂಡಾ ಅಭಿಮಾನಿಗಳು ಶರ್ಟ್ ಆರ್ಡರ್ ಮಾಡಿ ಕೊಂಡುಕೊಳ್ಳುತ್ತಿದ್ದಾರೆ. ಇದಕ್ಕೂ ಮುನ್ನ ಡಿಬಾಸ್​​,ದರ್ಶನ್ ಎಂದು ಇಂಗ್ಲೀಷ್​ನಲ್ಲಿ ಬರೆದಿರುವ ಟಿ-ಶರ್ಟ್​ಗಳು ಕೂಡಾ ಸಖತ್ ಕ್ರೇಜ್‌ ಹುಟ್ಟಿಸಿದ್ದವು. ಅಷ್ಟೇ ಅಲ್ಲ, ಸಾಕಷ್ಟು ಮಾರಾಟ ಕೂಡ ಆಗಿದ್ದವು. ಕೆಲವು ದಿನಗಳಲ್ಲಿ ದರ್ಶನ್ ಅಭಿನಯದ ಇತರ ಸಿನಿಮಾಗಳ ಫೋಟೋ ಇರುವ ಶರ್ಟ್ ಕೂಡಾ ಮಾರುಕಟ್ಟೆಗೆ ಬರಲಿದೆ ಎನ್ನಲಾಗಿದೆ.

Last Updated : Oct 16, 2019, 9:02 PM IST

ABOUT THE AUTHOR

...view details