ರಿಷಭ್ ಶೆಟ್ಟಿ ಸಿನಿಮಾಗಳು ಅಂದ್ರೆ ಅದ್ರಲ್ಲಿ ಏನೋ ಒಂದು ಕ್ಯೂರಿಯಾಸಿಟಿ, ಹೊಸತನ ಇರುತ್ತೆ. ಸದ್ಯ ಹಲವು ಸಿನಿಮಾಗಳನ್ನು ಕೈಗೆತ್ತಿಕೊಂಡಿರುವ ಇವರು, ಕಥಾ ಸಂಗಮ, ನಾಥೂರಾಮ್, ಆ್ಯಂಟನಿ, ರುದ್ರ ಪ್ರಯಾಗ ಸಿನಿಮಾಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ನಿರ್ದೇಶನದಲ್ಲಿ ಮೂಡಿ ಬಂದ ಸ.ಹಿ.ಪ್ರಾ.ಪಾಠ ಶಾಲೆ ಮತ್ತು ಕಿರಿಕ್ ಪಾರ್ಟಿ ಸಿನಿಮಾಗಳು ಬಿಗ್ ಹಿಟ್ ನೀಡಿದ್ದವು.
ಸದ್ಯ ರುದ್ರ ಪ್ರಯಾಗ ಸಿನಿಮಾಕ್ಕೆ ನಟರು ಬೇಕಾಗಿದ್ದು, ಅದಕ್ಕಾಗಿ ಜಾಹೀರಾತು ನೀಡಿದ್ದಾರೆ. ಜಾಹೀರಾತು ಪೋಸ್ಟರ್ನಲ್ಲಿ ಮಹಿಳಾ ಮತ್ತು ಪುರುಷ ನಟರಿಗೆ ಅವಕಾಶಗಳಿವೆ ಎಂದು ಹೇಳಲಾಗಿದೆ.
ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಸೀಮೆಯ ಪುರುಷ ಮತ್ತು ಮಹಿಳೆಯರಿಗೆ ಆದ್ಯತೆ ನೀಡಲಾಗಿದ್ದು, ಪುರುಷರಿಗೆ 35-55 ಹಾಗೂ ಮಹಿಳೆಯರಿಗೆ 30-45 ವಯೋಮಿತಿಯನ್ನು ನಿಗದಿ ಮಾಡಲಾಗಿದೆ.