ಕರ್ನಾಟಕ

karnataka

ETV Bharat / sitara

ಅನಾರೋಗ್ಯ ಕಾರಣದಿಂದ ರಾಗಿಣಿ ವಿಚಾರಣೆಗೆ ಬ್ರೇಕ್​; ಮೆಡಿಕಲ್ ಟೆಸ್ಟ್ ಬಳಿಕ ನಾಳೆ ವಿಚಾರಣೆ - ರಾಗಿಣಿ ವಿಚಾರಣೆಗೆ ಬ್ರೇಕ್​

ನಟಿ ರಾಗಿಣಿ, ರವಿ ಶಂಕರ್ ಹಾಗೂ ರಾಹುಲ್ ಸೇರಿ ಎಲ್ಲ ಆರೋಪಿಗಳ ವಿಚಾರಣೆಗೆ ಬ್ರೇಕ್ ಹಾಕಲಾಗಿದೆ. ಬಂಧಿತರಿಗೆ ಅವಶ್ಯವಿರುವ ಎಲ್ಲ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲಾಗುತ್ತಿದ್ದು,ನಾಳೆಯಿಂದ ಮತ್ತೆ ಆರೋಪಿಗಳ ವಿಚಾರಣೆಯನ್ನು ಸಿಸಿಬಿ ಅಧಿಕಾರಿಗಳು ಶುರು ಮಾಡಲಿದ್ದಾರೆ.

Actress Ragini
ರಾಗಿಣಿ

By

Published : Sep 5, 2020, 5:34 PM IST

ಬೆಂಗಳೂರು:ಸ್ಯಾಂಡಲ್​ವುಡ್ ಡ್ರಗ್ಸ್​​​​ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿಗೆ, ಸದ್ಯ ಬೆನ್ನು ನೋವು ಹಾಗೂ ವೈಯಕ್ತಿಕ ಕಾರಣದ ಮೇಲೆ ಮೆಡಿಕಲ್ ಟೆಸ್ಟ್ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಇಂದು ರಾಗಿಣಿ ವಿಚಾರಣೆ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದರು. ಆದರೆ ರಾಗಿಣಿಯನ್ನು ಮಹಿಳಾ ಸಾಂತ್ವನ ಕೇಂದ್ರದಿಂದ ಹೊರಗಡೆ ಕರೆ ತಂದಾಗ ಮತ್ತೆ ಹುಷಾರಿಲ್ಲದೆ ಹೋದರೆ ಅನ್ನೋ ಕಾರಣಕ್ಕೆ, ಕೊಂಚ ರಿಲ್ಯಾಕ್ಸ್ ನೀಡಿದ್ದೇವೆ ಎಂದು ಸಿಸಿಬಿ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಸದ್ಯದ ಮಟ್ಟಿಗೆ ರಾಗಿಣಿಯಿಂದ ಕೆಲ ಹೇಳಿಕೆ ಪಡೆದು, ಸಮಯವಕಾಶ ಕೊಟ್ಟು ನಾಳೆ ವಿಚಾರಣೆ ಮುಂದುವರಿಸಲು ನಿರ್ಧಾರ ಮಾಡಿದ್ದಾರೆ.

ರಾಗಿಣಿ ಕಸ್ಟಡಿ ಅವಧಿ ಸೋಮವಾರಕ್ಕೆ ಅಂತ್ಯವಾಗಲಿದೆ. ಹೀಗಾಗಿ ಸದ್ಯ ರಾಗಿಣಿಗೆ ಕೊಂಚ ಹೊತ್ತು ರಿಲ್ಸಾಕ್ಸ್ ನೀಡಲಾಗಿದೆ.

ಮತ್ತೊಂದೆಡೆ ಸ್ಯಾಂಡಲ್​ವುಡ್ ಡ್ರಗ್ಸ್ ದಂಧೆ ಪ್ರಕರಣದ ಪ್ರಮುಖ ಆರೋಪಿ ಶಿವ ಪ್ರಕಾಶ್, ಎರಡನೇ ಆರೋಪಿ ರಾಗಿಣಿ ದ್ವಿವೇದಿ, ಮೂರನೇ ಆರೋಪಿ ವಿರೇನ್ ಖನ್ನಾ, ನಾಲ್ಕನೇ ಆರೋಪಿ ಪ್ರಶಾಂತ್ ರಾಂಕಾ, ಐದನೇ ಆರೋಪಿ ವೈಭವ್ ಜೈನ್, ಆರನೇ ಆರೋಪಿ ಆದಿತ್ಯಾ ಆಳ್ವಾ, ಏಳನೇ ಆರೋಪಿ ಲೂಮ್ ಪೆಪ್ಪರ್( ಡಕಾರ್) ಸೈಮನ್, ಎಂಟನೇ ಆರೋಪಿ ಪ್ರಶಾಂತ್ ರಾಜು, ಒಂಬತ್ತನೇ ಆರೋಪಿ ಅಶ್ವಿನ್ ಅಲಿಯಾಸ್ ಬೂಗಿ, ಹತ್ತನೇ ಆರೋಪಿ ಅಭಿಸ್ವಾಮಿ, ಹನ್ನೊಂದನೇ ಆರೋಪಿ ರಾಹುಲ್ ತೋನ್ಸೆ ಮತ್ತು ಹನ್ನೆರಡನೇ ಆರೋಪಿ ವಿನಯ್ ಮೇಲೆ ಈಗಾಗಲೇ ಕಾಟನ್ ಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅದರಲ್ಲಿ ಐವರನ್ನು ಈಗಾಗಲೇ ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗೆ ನೋಟಿಸ್ ನೀಡದೇ ಬಂಧಿಸಲು ಪೊಲೀಸರು ನಿರ್ಧರಿಸಿದ್ದಾರೆ‌.

ಈ ನಡುವೆ ಕಾಟನ್ ಪೇಟೆಯಲ್ಲಿ ದಾಖಲಾಗಿರುವ ಎಫ್ಐಆರ್​ನ A5 ಆರೋಪಿಗೆ ಕೊರೊನಾ ಸೋಂಕು ಇರುವುದು ತಿಳಿದು ಬಂದಿದೆ. ಸದ್ಯ ನಗರದಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ಐದನೇ ಆರೋಪಿ ವೈಭವ್ ಜೈನ್ ಡ್ರಗ್ಸ್​ ಸಫ್ಲೇ ಮಾಡುತ್ತಿದ್ದನು. ಸದ್ಯ ಈತನಿಗೆ ಪಾಸಿಟಿವ್ ಬಂದ ಕಾರಣ ಹೋಂ ಐಸೋಲೇಟ್ ಆಗಿದ್ದಾನೆ. ಅದು ಮುಗಿದ ಕೂಡಲೇ ವೈಭವ್ ಜೈನ್‌ ಬಂಧಿಸಲು ಸಿಸಿಬಿ ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ.

ಕಾಟನ್ ಪೇಟೆಯಲ್ಲಿ ದಾಖಲಾದ FIRನಲ್ಲಿ ಹೆಸರಾಂತ ರಾಜಕಾರಣಿ ಮಗ ಕೂಡ ಇದ್ದಾನೆ. ಈತ ಮಾಜಿ ಸಚಿವರೊಬ್ಬರ ಪುತ್ರನಾಗಿದ್ದು,ಪ್ರಕರಣದ A6 ಆರೋಪಿಯಾಗಿದ್ದಾನೆ.

ಆದಿತ್ಯಾ ಆಳ್ವಾ ಬಾಲಿವುಡ್​ನ‌ ಹೆಸರಾಂತ ನಟರ ಬಾಮೈದ. ಸದ್ಯ ಆದಿತ್ಯಾ ಆಳ್ವಾನಿಗಾಗಿ ಸಿಸಿಬಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಎಫ್ಐಆರ್ ಬಳಿಕ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್​ ಮಾಡಿಕೊಂಡಿರೋ ಆದಿತ್ಯಾ ಆಳ್ವಾನ ಮೊಬೈಲ್ ಸಿಡಿಆರ್ ರಿಪೋರ್ಟ್ ಆಧರಿಸಿ ಹುಡುಕಾಟ ನಡೆಸಿದ್ದಾರೆ.

ನಟಿ ರಾಗಿಣಿ, ರವಿ ಶಂಕರ್ ಹಾಗೂ ರಾಹುಲ್ ಸೇರಿ ಎಲ್ಲ ಆರೋಪಿಗಳ ವಿಚಾರಣೆಗೆ ಬ್ರೇಕ್ ಹಾಕಲಾಗಿದೆ. ಆರೋಪಿಗಳ ಬಂಧನ ಸಂಬಂಧ ಸಾಕಷ್ಟು ಪೇಪರ್ ವರ್ಕ್ ಬಾಕಿ ಇರುವುದರಿಂದ, ಸಿಸಿಬಿ ಆದರಲ್ಲಿ ತೊಡಗಿಸಿಕೊಂಡಿದೆ. ಹೀಗಾಗಿ ಬಂಧಿತರಿಗೆ ಅವಶ್ಯವಿರುವ ಎಲ್ಲ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುತ್ತಿದ್ದು, ನಾಳೆಯಿಂದ ಮತ್ತೆ ಆರೋಪಿಗಳ ವಿಚಾರಣೆ ಶುರು ಮಾಡಲಿದ್ದಾರೆ.

ABOUT THE AUTHOR

...view details