ಕರ್ನಾಟಕ

karnataka

ETV Bharat / sitara

ಸ್ಯಾಂಡಲ್​ವುಡ್​ನಲ್ಲಿ ಪೈಪೋಟಿಗೆ ಬಿದ್ದು ಒಂದೇ ದಿನ ರಿಲೀಸ್​ಗೆ ರೆಡಿಯಾದ ಚಿತ್ರಗಳಿವು.. - ಅಜಯ್ ರಾವ್ ನಟನೆಯ ಲವ್​ ಯು ರಚ್ಚು

ಚಿತ್ರಮಂದಿರಗಳು ತೆರೆದುಕೊಳ್ಳುತ್ತಿದ್ದಂತೆ ಸ್ಯಾಂಡಲ್​ವುಡ್​​ನಲ್ಲಿ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧಗೊಂಡಿದ್ದು, ಒಂದೇ ದಿನ ಸ್ಟಾರ್​ ನಟರ ಚಿತ್ರಗಳು ಪ್ರೇಕ್ಷಕರ ಮುಂದೆ ಬರಲು ಕಾದು ಕುಳಿತಿವೆ.

big-stars-movies-ready-to-release-on-same-day-in-sandalwood
.ಒಂದೇ ದಿನ ರಿಲೀಸ್​ಗೆ ರೆಡಿಯಾಗಿವೆ ಸಾಲು ಸಾಲು ಚಿತ್ರ

By

Published : Oct 27, 2021, 2:19 PM IST

ಸ್ಯಾಂಡಲ್​ವುಡ್​ನಲ್ಲಿ ಬಿಗ್​​​ಸ್ಟಾರ್​​ಗಳ ಚಿತ್ರ ಒಂದೇ ದಿನ ತೆರೆಗೆ ಬರುವ ಮೂಲಕ ಅಚ್ಚರಿ ಜೊತೆಗೆ ಬಾಕ್ಸ್​ ಆಫೀಸ್​​ನಲ್ಲಿ ಉತ್ತಮ ಕಲೆಕ್ಷನ್ ಸಹ ಮಾಡಿವೆ. ದಸರಾದಂದು ತೆರೆಕಂಡಿದ್ದ ಕೋಟಿಗೊಬ್ಬ-3 ಹಾಗೂ ಸಲಗ ಚಿತ್ರಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದು, ಸ್ಯಾಂಡಲ್​ವುಡ್​​ಗೆ ಒಂದೊಳ್ಳೆ ಸ್ಟಾರ್ಟ್​ ನೀಡಿವೆ.

ಹೀಗೆ ಮುಂದಿನ ವಾರವೂ ಸಹ ಸಾಲು ಸಾಲು ಚಿತ್ರಗಳು ಒಂದೇ ದಿನ ಬಿಡುಗಡೆಗೆ ತುದಿಗಾಲಲ್ಲಿ ನಿಂತಿವೆ. ನ.12ರಂದು ನೆನಪಿರಲಿ ಪ್ರೇಮ್ ನಟನೆಯ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’ ತೆರೆಗೆ ಬರುವ ಜೊತೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಸಖತ್’ ಸಹ ಅಂದೇ ತೆರೆಗೆ ಬರಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಇತ್ತ ಅ.29ರಂದು ತೆರೆಗೆ ಬರಲು ಸಿದ್ಧವಾಗಿದ್ದ ಪ್ರೇಮಂ ಪೂಜ್ಯಂ ಚಿತ್ರ ಬಳಿಕ ‘ಭಜರಂಗಿ-2’ ಚಿತ್ರಕ್ಕೆ ದಾರಿ ಮಾಡಿಕೊಟ್ಟು ತನ್ನ ಬಿಡುಗಡೆ ದಿನಾಂಕ ಮುಂದಕ್ಕೆ ಹಾಕಿದೆ.

ಗಣೇಶ್ ಅಭಿನಯದ ಸಖತ್ ಚಿತ್ರ ನ.12ಕ್ಕೆ ಬರುವುದು ಖಚಿತವಾದರೆ ಇಬ್ಬರು ಸ್ಟಾರ್​​​ಗಳ ಚಿತ್ರ ಒಂದೇ ದಿನ ಮಂದಿರದಲ್ಲಿ ರಾರಾಜಿಸಲಿದೆ. ಆದರೆ ಚಿತ್ರ ಬಿಡುಗಡೆ ಕುರಿತಂತೆ ಸಖತ್ ಚಿತ್ರತಂಡ ಇನ್ನೂ ಯಾವುದೇ ದಿನಾಂಕ ನಿಗದಿ ಮಾಡಿಲ್ಲ.

ಶರಣ್ ಅಭಿನಯದ ‘ಅವತಾರ್​ ಪುರುಷ’

ನ.19ರಂದು ಸಹ ಬಿಡುಗಡೆಯಾಗಲು ಚಿತ್ರಗಳು ರೆಡಿಯಾಗಿವೆ. ರಾಜ್​ ಬಿ.ಶೆಟ್ಟಿ, ರಿಷಬ್ ಶೆಟ್ಟಿ ಅಭಿನಯದ ‘ಗರುಡ ಗಮನ ವೃಷಭ ವಾಹನ’ ಚಿತ್ರ ಬಿಡುಗಡೆಯಾಗುವುದು ಖಚಿತವಾಗಿದೆ. ಈ ಬಗ್ಗೆ ಚಿತ್ರತಂಡ ವಾರದ ಹಿಂದೆಯೇ ದಿನಾಂಕ ಘೋಷಿಸಿದೆ. ಇದರ ಜೊತೆ ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ ‘ಮುಗಿಲ್​ಪೇಟೆ’ ಸಹ ಅಂದೇ ಬಿಡುಗಡೆಯಾಗುತ್ತಿದೆ. ಈ ನಡುವೆ ರಮೇಶ್ ಅರವಿಂದ್ ನಟನೆಯ ‘100’ ಸಹ ಈ ದಿನ ಬಿಡುಗಡೆಯಾಗುವುದು ನಿಶ್ಚಿತವಾಗಿದೆ.

ಮನೋರಂಜನ್ ನಟನೆಯ ‘ಮುಗಿಲ್​ಪೇಟೆ’

ಇತ್ತ ನ.29ರಂದು ಶರಣ್ ಅಭಿನಯದ ‘ಅವತಾರ್​ ಪುರುಷ’ ಬಿಡುಗಡೆಗೆ ತಯಾರಿ ನಡೆಸುತ್ತಿದ್ದರೆ ಅಜಯ್ ರಾವ್ ನಟನೆಯ ‘ಲವ್​ ಯು ರಚ್ಚು’ ಚಿತ್ರ ಸಹ ನ.29ಕ್ಕೆ ತೆರೆಗೆ ಬರುವ ಮುನ್ಸೂಚನೆ ಇದೆ ಎನ್ನಲಾಗಿದೆ.

ರಾಜ್​ ಬಿ. ಶೆಟ್ಟಿ, ರಿಷಬ್ ಶೆಟ್ಟಿ ಅಭಿನಯದ ‘ಗರುಡ ಗಮನ ವೃಷಭ ವಾಹನ’

ಇದನ್ನೂ ಓದಿ:ಲವ್ಲಿ ಸ್ಟಾರ್ 'ಪ್ರೇಮಂ ಪೂಜ್ಯಂ' ಬಿಡುಗಡೆ ಮುಂದೂಡಿಕೆ: ಕಾರಣ ಏನು ಗೊತ್ತಾ?

ABOUT THE AUTHOR

...view details