ಸ್ಯಾಂಡಲ್ವುಡ್ನಲ್ಲಿ ಸದ್ಯಕ್ಕೆ ಐತಿಹಾಸಿಕ ಚಿತ್ರಗಳ ಜಮಾನ ಶುರುವಾಗಿದೆ. ಈಗ ಅವುಗಳ ಸಾಲಿಗೆ ಬಿಗ್ಬಾಸ್ ಖ್ಯಾತಿಯ ಭುವನ್ ಪೊನ್ನಪ್ಪ ಅಭಿನಯದ 'ರಾಂಧವ' ಎಂಬ ಆ್ಯಕ್ಷನ್ ಸಿನಿಮಾ ಕೂಡಾ ಸೇರಿದೆ.
ಭುವನ್ ಪೊನ್ನಪ್ಪ ಅಭಿನಯದ 'ರಾಂಧವ' ಚಿತ್ರದ ಆಡಿಯೋ ಬಿಡುಗಡೆ - ಐತಿಹಾಸಿಕ ಚಿತ್ರ
ಬಿಗ್ಬಾಸ್ ಖ್ಯಾತಿಯ ಭುವನ್ ಪೊನ್ನಪ್ಪ ಅಭಿನಯದ ಆ್ಯಕ್ಷನ್, ಥ್ರಿಲ್ಲರ್ 'ರಾಂಧವ' ಸಿನಿಮಾದ ಆಡಿಯೋ ಬಿಡುಗಡೆಯಾಗಿದೆ. ದೇಶದ ಬೆನ್ನೆಲುಬು ರೈತರ ಕೈಯಿಂದ ಈ ಚಿತ್ರದ ಆಡಿಯೋವನ್ನು ಬಿಡುಗಡೆ ಮಾಡಿಸಲಾಯಿತು.
ಮಲ್ಲೇಶ್ವರಂನ ಎಸ್ಆರ್ವಿ ಥಿಯೇಟರ್ನಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ರೈತರಿಂದ 'ರಾಂಧವ' ಚಿತ್ರದ ಆಡಿಯೋವನ್ನು ಬಿಡುಗಡೆ ಮಾಡಿಸಲಾಯಿತು. ನಿರ್ಮಾಪಕ ಸನತ್ ಕುಮಾರ್ ಪುತ್ರ ಸುನಿಲ್ ಆಚಾರ್ಯ ಈ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಮೂರು ತಲೆಮಾರುಗಳ ಕಥೆ ಹೊಂದಿರುವ 'ರಾಂಧವ' ಚಿತ್ರದಲ್ಲಿ ಆ್ಯಕ್ಷನ್, ಥ್ರಿಲ್ಲರ್ ಸಸ್ಪೆನ್ಸ್ ಹಾಗೂ ಲವ್ಸ್ಟೋರಿ ಎಲ್ಲ ಇದೆ. ಈಗಾಗಲೇ ಟ್ರೇಲರ್ನಿಂದಲೇ 'ರಾಂಧವ' ಚಿತ್ರ ಗಮನ ಸೆಳೆದಿದೆ. ಚಿತ್ರದಲ್ಲಿ ಹೆಚ್ಚಾಗಿ ಗ್ರಾಫಿಕ್ ಬಳಸಲಾಗಿದೆಯಂತೆ. ಮೂವರು ನಾಯಕಿಯರ ಜೊತೆ ಭುವನ್ ರೊಮ್ಯಾನ್ಸ್ ಮಾಡಿದ್ದಾರೆ. ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು ಕನ್ನಡದ ಗಾಯಕರು 5 ಹಾಡುಗಳನ್ನು ಹಾಡಿದ್ದು ಒಂದು ಹಾಡನ್ನು ಚೆನ್ನೈ ಪ್ರತಿಭೆ ಹಾಡಿದ್ದಾರೆ.