ಕರ್ನಾಟಕ

karnataka

ETV Bharat / sitara

ಆರ್ಯನ್ ಬಾಲ್ಯದ ಗೆಳತಿ ಅನನ್ಯಾ.. ವಿದೇಶಗಳಲ್ಲಿ ಮೋಜು - ಮಸ್ತಿ, ಹತ್ತಾರು ಪಾರ್ಟಿಗಳಲ್ಲಿ ಕಾಣಿಸಿಕೊಂಡಿತ್ತು ಈ ಜೋಡಿ! - Ananya Panday at NCB

ಬಾಲಿವುಡ್​ ಡ್ರಗ್ಸ್​​ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದಂತೆ ಆರ್ಯನ್​ ಖಾನ್​ ಬಂಧನದ ಬೆನ್ನಲ್ಲೇ ಇದೀಗ ನಟಿ ಅನನ್ಯಾ ಪಾಂಡೆಗೂ ಎನ್​ಸಿಬಿ ಬುಲಾವ್​ ನೀಡಿದೆ.

Aryan Khan and Ananya Pandey
ಆರ್ಯನ್​ ಖಾನ್​ ಹಾಗೂ ಅನನ್ಯಾ ಪಾಂಡೆ

By

Published : Oct 21, 2021, 4:58 PM IST

Updated : Oct 21, 2021, 5:36 PM IST

ಹೈದರಾಬಾದ್​​:ಬಾಲಿವುಡ್​​ನ ಡ್ರಗ್ಸ್​​ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಎನ್​​ಸಿಬಿಯಿಂದ ಬಂಧನಕ್ಕೊಳಗಾಗಿರುವ ಆರ್ಯನ್​ ಖಾನ್ ಈಗಾಗಲೇ ಮುಂಬೈನ ಆರ್ಥರ್​ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ.

ಪಾರ್ಟಿಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದ ಅನನ್ಯಾ-ಆರ್ಯನ್​

ಇದರ ಬೆನ್ನಲ್ಲೇ ಆತನ ಬಾಲ್ಯ ಸ್ನೇಹಿತೆ, ನಟಿ ಅನನ್ಯಾ ಪಾಂಡೆಗೂ ಇದೀಗ ಸಂಕಷ್ಟ ಶುರುವಾಗಿದೆ.

ಬಾಲ್ಯದ ಸ್ನೇಹಿತರಾಗಿದ್ದ ಅನನ್ಯಾ-ಆರ್ಯನ್​

ಇಬ್ಬರ ನಡುವೆ ಡ್ರಗ್ಸ್​​ ವಿಚಾರವಾಗಿ ವ್ಯಾಟ್ಸ್ಆ್ಯಪ್​ ಚಾಟ್​ ನಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ನೋಟಿಸ್​​ ಜಾರಿ ಮಾಡಲಾಗಿದ್ದು, ಅದರಂತೆ ನಟಿ ಅನನ್ಯಾ ಈಗಾಗಲೇ ಎನ್​​ಸಿಬಿ ಕಚೇರಿಗೆ ಆಗಮಿಸಿದ್ದಾರೆ.

ವಿದೇಶದಲ್ಲೂ ಒಟ್ಟಿಗೆ ಕಾಣಿಸಿಕೊಂಡಿತ್ತು ಜೋಡಿ

ವಿಶೇಷ ಎಂದರೆ ಆರ್ಯನ್ ಖಾನ್ ಹಾಗೂ ಅನನ್ಯಾ ಪಾಂಡೆ ಬಾಲ್ಯದ ಸ್ನೇಹಿತರಾಗಿದ್ದು, ಅನೇಕ ಸಲ ಒಟ್ಟಿಗೆ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ಫ್ಯಾಮಿಲಿ ಟುಗೆದರ್​​ ಜೊತೆಗೆ ವಿದೇಶಿ ಪ್ರವಾಸಗಳಲ್ಲೂ ಒಟ್ಟಿಗೆ ಮೋಜು - ಮಸ್ತಿ ಮಾಡಿದ್ದು, ಅದರ ಫೋಟೋ ಲಭ್ಯವಾಗಿವೆ.

ಅನೇಕ ಪಾರ್ಟಿಗಳಲ್ಲಿ ಭಾಗಿಯಾಗಿದ್ದ ಆರ್ಯನ್​​-ಅನನ್ಯಾ

ಇದನ್ನೂ ಓದಿರಿ: ಜೈಲಲ್ಲಿ ಪುತ್ರನ ಭೇಟಿ ಮುಗಿಸಿ ಬರ್ತಿದ್ದಂತೆ ಶಾರುಖ್‌ಗೆ ಎನ್‌ಸಿಬಿ ಬಿಸಿ; ವಿಚಾರಣೆಗೆ ಬರುವಂತೆ ಅನನ್ಯಾ ಪಾಂಡೆಗೂ ಸಮನ್ಸ್‌

22 ವರ್ಷದ ಅನನ್ಯಾ ಈಗಾಗಲೇ ಬಾಲಿವುಡ್​ ಚಿತ್ರರಂಗಕ್ಕೆ ಲಗ್ಗೆ ಹಾಕಿದ್ದು, 23 ವರ್ಷದ ಆರ್ಯನ್ ಖಾನ್​ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಕರಣ್​ ಜೋಹರ್​ ನಿರ್ದೇಶನದ 'ಸ್ಟೂಡೆಂಟ್​ ಆಫ್​ ದಿ ಇಯರ್​​ 2' ಚಿತ್ರದ ಮೂಲಕ ಅನನ್ಯಾ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದರು.

ಆರ್ಯನ್ ಬಾಲ್ಯದ ಗೆಳತಿ ಅನನ್ಯಾ

ಮುಂಬೈನ ವಿಶೇಷ ಎನ್​ಡಿಪಿಎಸ್ ನ್ಯಾಯಾಲಯದಿಂದ ನಿನ್ನೆ ಮಹತ್ವದ ತೀರ್ಪು ಹೊರಬಿದ್ದಿದ್ದು, ಆರ್ಯನ್​ ಖಾನ್​ಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಈ ವೇಳೆ ನಟಿ ಅನನ್ಯಾ ಜೊತೆ ಡ್ರಗ್ಸ್​ ವಿಚಾರವಾಗಿ ಚಾಟ್​​ ನಡೆದಿರುವ ಮಾಹಿತಿ ಕೂಡ ಬಹಿರಂಗಗೊಂಡಿತ್ತು.

ಆರ್ಯನ್ ಖಾನ್ ಜೊತೆ ನಟಿ ಅನನ್ಯಾ ಪಾಂಡೆ

ಹೀಗಾಗಿ ಎನ್​​ಸಿಬಿ ಅಧಿಕಾರಿಗಳು ಇಂದು ಅವರ ಮನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಜೊತೆಗೆ ಲ್ಯಾಪ್​ಟಾಪ್​ ಹಾಗೂ ಮೊಬೈಲ್​ ವಶಕ್ಕೆ ಪಡೆದುಕೊಂಡು, 2ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ಜಾರಿ ಮಾಡಿದ್ದರು.

Last Updated : Oct 21, 2021, 5:36 PM IST

ABOUT THE AUTHOR

...view details