ಆಸ್ಕರ್ ಪ್ರಶಸ್ತಿ ವಿಜೇತ ಹಾಗೂ ಭಾರತದ ಸುಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಹಾಲಿವುಡ್‌ನಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಅಷ್ಟೇ ಅಲ್ಲದೆ, ರೆಹಮಾನ್ ಅವರ ಇಬ್ಬರು ಪುತ್ರಿಯರು ಸಹ ಗಾಯಕಿಯರಾಗಿದ್ದು, ಮಕ್ಕಳಿಗೆ ಕೆಲ ಸಲಹೆಗಳನ್ನು ನೀಡಿದ್ದಾರೆ.
ಎ.ಆರ್.ರೆಹಮಾನ್ ಅವರಿಗೆ ರಹೀಮಾ ರೆಹಮಾನ್ ಮತ್ತು ಖತೀಜಾ ರೆಹಮಾನ್ ಎಂಬ ಪುತ್ರಿಯರಿದ್ದು, ಇಬ್ಬರೂ ಕೂಡ ಸಂಗೀತಗಾರರು. ತಂದೆಯ ಹಾದಿಯಲ್ಲೇ ಸಾಗುತ್ತಿರುವ ಪುತ್ರಿಯರು ಈಗಾಗಲೇ ಆನ್ಲೈನ್ನಲ್ಲಿ ಅಪಾರ ಅಭಿಮಾನಿಗಳು ಹಾಗೂ ಫಾಲೋವರ್ಸ್ ಹೊಂದಿದ್ದಾರೆ. 2019 ರಲ್ಲಿ ಮುಂಬೈನಲ್ಲಿ U2 ಸಂಗೀತ ಕಚೇರಿಯಲ್ಲಿ ತಮ್ಮ ತಂದೆಯೊಂದಿಗೆ ಪ್ರದರ್ಶನ ನೀಡಿದ್ದರು. ಜೊತೆಗೆ, 'ಮಿಮಿ' ಸಿನಿಮಾದಲ್ಲಿ ಖತೀಜಾ ಅವರು ಹೇಳಿದ ಹಾಡು 'ರಾಕ್ ಎ ಬೈ ಬೇಬಿ' ಅನೇಕರಿಂದ ಮೆಚ್ಚುಗೆ ಪಡೆದುಕೊಂಡಿದೆ.
ಇದನ್ನೂ ಓದಿ:'ನಿಮ್ಮ ಫೋನ್ ರೂಮಲ್ಲೇ ಬಿಟ್ಟು ಬನ್ನಿ' ವಿಕ್ಕಿ-ಕತ್ರಿನಾ ಕೈಫ್ ಮದುವೆ ಅತಿಥಿಗಳಿಗೆ ಸೂಚನೆ.. ಸ್ವಾಗತ ಪತ್ರಿಕೆ ವೈರಲ್
ತಮ್ಮ ಪುತ್ರಿಯರ ಬಗ್ಗೆ ಮಾಧ್ಯಮಗಳಲ್ಲಿ ಮಾತನಾಡಿದ ಎ.ಆರ್.ರೆಹಮಾನ್, ಅವರು ಏನೇ ಮಾಡಿದರೂ ಒಳ್ಳೆಯದಾಗುತ್ತದೆ ಎಂದು ಭಾವಿಸುತ್ತಾರೆ. ಯಾವುದರ ಬಗ್ಗೆಯೂ ಚಿಂತಿಸಬೇಡಿ. ನಿಮಗೆ ಸರಿ ಎನಿಸಿದ ವಿಷಯದ ಕುರಿತು ಹೆಚ್ಚು ಆಸಕ್ತಿವಹಿಸಿ, ಆನಂತರ ಮಾತ್ರ ನೀವು ನಿಮ್ಮ ಸ್ವಂತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತೀರಿ ಎಂದು ನಾನು ಅವರಿಗೆ ಹೇಳುತ್ತಲೇ ಇರುತ್ತೇನೆ. ನಾನು ಸಂಗೀತಗಾರ. ಜನರು ಪುತ್ರಿಯರ ಸಂಗೀತವನ್ನು ನನ್ನ ಸಂಗೀತಕ್ಕೆ ಸಹಜವಾಗಿ ಹೋಲಿಕೆ ಮಾಡುತ್ತಾರೆ. ಆದರೆ ಪುತ್ರಿಯರು ಅಂಥಾ ಹೋಲಿಕೆಯನ್ನು ತಮಗೆ ತಾವೇ ಮಾಡಿಕೊಳ್ಳಬಾರದು. ಶ್ರದ್ಧೆಯಿಂದ ಸಂಗೀತದ ಕೆಲಸದಲ್ಲಿ ತೊಡಗಿಕೊಳ್ಳುವುದಷ್ಟನ್ನೇ ಮಾಡಿದರೆ ಸಾಕು, ದೇವರು ಅವರನ್ನು ಹರಸುತ್ತಾನೆ ಎಂದು ಸಲಹೆ ನೀಡಿದರು.
ಇದನ್ನೂ ಓದಿ:ಮಾಡೆಲಿಂಗ್ ಕ್ಷೇತ್ರಕ್ಕೆ ಅಡಿಯಿಟ್ಟ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ
ತಮ್ಮ ಮಕ್ಕಳಿಗೆ ಮಾತ್ರವಲ್ಲದೇ ರೆಹಮಾನ್ ಅವರು ಕೆಲ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ವಿಶೇಷವಾಗಿ ಅವರ ಸಂಸ್ಥೆ ಕೆಎಂ ಮ್ಯೂಸಿಕ್ ಕನ್ಸರ್ವೇಟರಿ ಮತ್ತು BAFTA ಬ್ರೇಕ್‌ಥ್ರೂ ಇಂಡಿಯಾ ಇನಿಶಿಯೇಟಿವ್ ಮೂಲಕ ಚಲನಚಿತ್ರ, ಟಿವಿಯಲ್ಲಿ ಕೆಲಸ ಮಾಡುವ ಅನೇಕ ಪ್ರತಿಭೆಗಳನ್ನು ಗುರುತಿಸಿ ಬೆಂಬಲಿಸುತ್ತಿದ್ದಾರೆ.