ಅಮ್ಮನಿಗೆ ಕನ್ನಡದಲ್ಲೇ ಜನ್ಮದಿನದ ಶುಭಾಶಯ ತಿಳಿಸಿರುವ ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ಎಲ್ಲರಿಂದ ಮೆಚ್ಚುಗೆ ಪಡೆದಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ತಮ್ಮ ಅಮ್ಮ ಸೇರಿದಂತೆ ಕುಟುಂಬಸ್ಥರು ಇರುವ ಫೋಟೊ ಹಾಕಿರುವ ಅನುಷ್ಕಾ ಶೆಟ್ಟಿ ಅವರು 'ಜನ್ಮದಿನದ ಹಾರ್ದಿಕ ಶುಭಾಶಯಗಳು ಅಮ್ಮಾ' ಎಂದು ಮಾತೃ ಭಾಷೆಯಲ್ಲೇ ವಿಶ್ ಮಾಡಿದ್ದಾರೆ.
ಅನುಷ್ಕಾ ಶೆಟ್ಟಿ ಫೇಸ್ಬುಕ್ ಪೋಸ್ಟ್ ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಸದ್ಯ ಟಾಲಿವುಡ್ನಲ್ಲಿ ಹೆಸರು ಮಾಡಿರುವ ಬಾಹುಬಲಿಯ ನಟಿ ಪೋಸ್ಟ್ಗೆ ಲಕ್ಷಾಂತರ ಜನ ಲೈಕ್ ಮಾಡಿದ್ದಾರೆ. ಅಲ್ಲದೆ, ಸಾವಿರಾರು ಮೆಚ್ಚುಗೆಯ ಕಾಮೆಂಟ್ಗಳನ್ನು ಬರೆದಿದ್ದಾರೆ.
ಇನ್ನು ಕೆಲವರು ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ ರಶ್ಮಿಕಾ ಮಂದಣ್ಣ ಅವರನ್ನು ನೆಟ್ಟಿಗರು ಜರಿದಿದ್ದಾರೆ. 'ಇತ್ತೀಚೆಗಷ್ಟೇ ಚಿತ್ರರಂಗ ಪ್ರವೇಶಿಸಿ ಕನ್ನಡ ಗೊತ್ತಿಲ್ಲ ಅಂತೀಯಲ್ಲ, ಕನ್ನಡದಿಂದ ಹೋಗಿ ತೆಲುಗಿನಲ್ಲಿ ಸಕ್ಸಸ್ ಆಗಿರುವ ನಮ್ಮ ಅನುಷ್ಕಾರನ್ನು ನೋಡಿ ಒಂದ್ ಚೂರಾದ್ರೂ ಸಂಸ್ಕಾರ್ ಕಲ್ತ್ಕೋ' ಅಂತಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಜುಲೈ 31 ಅನುಷ್ಕಾ ಶೆಟ್ಟಿ ಅವರ ತಾಯಿ ಪ್ರಫುಲ್ಲ ಅವರ ಜನ್ಮ ದಿನ. ಈ ಸಂಭ್ರಮದಲ್ಲಿ ಅನುಷ್ಕಾ ಅಮ್ಮನಿಗೆ ಕನ್ನಡದಲ್ಲಿ ಶುಭಾಶಯ ತಿಳಿಸಿ ಮಾತೃ ಭಾಷೆ ಪ್ರೇಮವನ್ನೂ ಮೆರೆದಿದ್ದಾರೆ.