ಕರ್ನಾಟಕ

karnataka

ETV Bharat / sitara

ಯುಗಾದಿ ಗಿಫ್ಟ್​​....'ಅಮರ್' ಮೂವಿ ಫಸ್ಟ್ ಸಾಂಗ್ ರಿಲೀಸ್​! - ಫಸ್ಟ್ ಸಾಂಗ್

ಈಗಾಗಲೇ ಅಮರ್ ಚಿತ್ರದ ಟೀಸರ್​ ಬಿಡುಗಡೆಯಾಗಿ ಸಖತ್ ಸದ್ದು ಮಾಡುತ್ತಿದೆ. ಈಗ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ದೇಶ-ವಿದೇಶ ಸೇರಿದಂತೆ ಅತೀ ಹೆಚ್ಚು ಲೋಕೇಶನ್​​ಗಳಲ್ಲಿ ಈ ಸಾಂಗ್ ಶೂಟ್ ನಡೆದಿದೆ.

ಅಮರ್

By

Published : Apr 6, 2019, 4:08 PM IST

ಜ್ಯೂನಿಯರ್​​ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್​​ ಅಭಿನಯದ 'ಅಮರ್' ಚಿತ್ರದ ಮೊದಲ‌ ಸಾಂಗ್​ ಯುಗಾದಿ ಪ್ರಯುಕ್ತ ಬಿಡುಗಡೆಯಾಗಿದೆ.

ಕೊಯಂಬತ್ತೂರು, ಮಂಗಳೂರು, ಮೈಸೂರು, ಸಿಂಗಾಪುರ್, ಮಲೇಷಿಯಾ ಹಾಗೂ ಸ್ವಿಡ್ಜರ್​​​ಲ್ಯಾಂಡ್ ಸೇರಿದಂತೆ ಅತೀ ಹೆಚ್ಚು ಲೋಕೇಶನ್​​ಗಳಲ್ಲಿ ಶೂಟ್ ಮಾಡಿರುವುದು ಈ ಸಾಂಗ್ ಸ್ಪೆಷಾಲಿಟಿ. ಕವಿರಾಜ್ ಬರೆದ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸಂಚಿತ್ ಹೆಗಡೆ ಧ್ವನಿಯಾಗಿದ್ದಾರೆ. ಚಿತ್ರದಲ್ಲಿ ಅಭಿಗೆ ನಾಯಕಿಯಾಗಿ ತಾನ್ಯಾ ಹೋಪ್ ನಟಿಸಿದ್ದು, ಬೈಕ್ ರೇಸ್ ಹಿನ್ನೆಲೆಯಾಗಿಟ್ಟುಕೊಂಡು ಒಂದು ಮುದ್ದಾದ ಲವ್ ಸ್ಟೋರಿ ತೆರೆ ಮೇಲೆ ತೋರಿಸಲು ರೆಡಿಯಾಗಿದ್ದಾರೆ ನಿರ್ದೇಶಕ ನಾಗ್​ಶೇಖರ್.

ಇನ್ನು ಅಮರ್​​ಗೆ ಸಂದೇಶ್ ನಾಗರಾಜ್ ಬಂಡವಾಳ ಹೂಡಿದ್ದು, ವಿಶೇಷ ಪಾತ್ರಗಳಲ್ಲಿ ನಟ ದರ್ಶನ್, ನಿರೂಪ್ ಭಂಡಾರಿ, ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಪೋಷಕ ಪಾತ್ರಗಳಲ್ಲಿ ದೇವರಾಜ್, ಚಿಕ್ಕಣ್ಣ, ಸಾಧು ಕೋಕಿಲಾ ಮುಂತಾದವರು ನಟಿಸಿದ್ದಾರೆ. ಸದ್ಯ ರಿಲೀಸ್​ ಆಗಿರುವ ಹಾಡಿನಲ್ಲಿ ರೆಬಲ್ ಸ್ಟಾರ್​ ಅಂಬರೀಶ್ ಇದ್ದಾಗ ಶೂಟಿಂಗ್ ಲೋಕೇಶನ್​​ಗೆ ಬಂದಿರೋದು ಈ ಹಾಡಿನಲ್ಲಿ ಕಾಣ್ಬುಹುದು.

ABOUT THE AUTHOR

...view details