ಟಾಲಿವುಡ್ ನಟ ಅಲ್ಲು ಅರ್ಜುನ್ ಮದುವೆಯಾಗಿ ಇಂದಿಗೆ ಬರೋಬ್ಬರಿ 9 ವರ್ಷಗಳು ಉರುಳಿವೆ. ಈ ಸಂಭ್ರಮವನ್ನು ಸ್ಟೈಲಿಶ್ ಸ್ಟಾರ್ ಅಲ್ಲು ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ.
ಮದುವೆಯಾಗಿ 9 ವರ್ಷ ಕಳೆದದ್ದು ಸ್ಟೈಲಿಶ್ ಸ್ಟಾರ್ಗೆ ಗೊತ್ತೇ ಆಗ್ಲಿಲ್ಲವಂತೆ - ಅಲ್ಲು ಅರ್ಜುನ್
ಟಾಲಿವುಡ್ ನಟ ಅಲ್ಲು ಅರ್ಜುನ್ ಮದುವೆಯಾಗಿ ಇಂದಿಗೆ ಬರೋಬ್ಬರಿ 9 ವರ್ಷಗಳು ಉರುಳಿವೆ. ಈ ಸಂಭ್ರಮವನ್ನು ಸ್ಟೈಲಿಶ್ ಸ್ಟಾರ್ ಅಲ್ಲು ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ.
ಮದುವೆಯಾಗಿ ನವ ವಸಂತಕ್ಕೆ ಕಾಲಿಟ್ಟ ಸ್ಟೈಲಿಶ್ ಸ್ಟಾರ್
ಪತ್ನಿ ಸ್ನೇಹ ಜೊತೆಗಿನ ಮದುವೆ ಆಲ್ಬಮ್ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿರುವ ಅಲ್ಲು ಅರ್ಜುನ್, ಮದುವೆಯಾಗಿ 9 ವರ್ಷ ಅತಿ ವೇಗವಾಗಿ ಕಳೆದಿವೆ. ಆದ್ರೆ ಪ್ರೀತಿ ಪ್ರತಿ ದಿನ ಅರಳುತ್ತಿದೆ ಎಂದು ಕ್ಯಾಪ್ಶನ್ ಬರೆದಿದ್ದಾರೆ.
ಅಲ್ಲು ಶೇರ್ ಮಾಡಿರುವ ಫೋಟೋದಲ್ಲಿ ಅಲ್ಲು ಅರ್ಜುನ್ ವೈಟ್ ವೆಡ್ಡಿಂಗ್ ಡ್ರೆಸ್ನಲ್ಲಿ ಕಾಣಿಸಿದ್ರೆ ಪಕ್ಕದಲ್ಲಿರುವ ಪತ್ನಿ ಸ್ನೇಹ ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿದ್ದಾರೆ.