ಕರ್ನಾಟಕ

karnataka

ETV Bharat / sitara

ಹುಟ್ಟು ಹಬ್ಬದ ದಿನವೇ "ಅಂಬುಜ"ಅವತಾರ ತಾಳಿದ ಮೊಗ್ಗಿನ ಮನಸ್ಸಿನ ಹುಡುಗಿ - Acter Shubha poonja birth day

ಬರ್ತ್ ಡೇ ದಿನ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿರುವ ಶುಭಾ ಪೂಂಜಾ "ಅಂಬುಜ" ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ಲೀಡ್ ರೋಲ್ ಪ್ಲೇ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

Shubha poonja
Shubha poonja

By

Published : Aug 5, 2020, 6:38 PM IST

ಮೊಗ್ಗಿನ ಮನಸ್ಸಿನ ಹುಡುಗಿ ಶುಭಾ ಪೂಂಜಾಗೆ ಇಂದು ಹುಟ್ಟು ಹಬ್ಬದ ಸಂಭ್ರಮ, 36ನೇ ವಸಂತಕ್ಕೆ ಕಾಲಿಟ್ಟಿರುವ ಶುಭಾ ಪೂಂಜ, ಕೊರೊನಾ ದಿಂದಾಗಿ ಸರಳವಾಗಿ ಕುಟುಂಬದವರ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಅಲ್ಲದೆ ಹುಟ್ಟು ಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ಆಗಿ ಮಹಿಳಾ ಪ್ರಧಾನ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ.

ಶುಭಾ ಅವರು "ಅಂಬುಜ" ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ಲೀಡ್ ರೋಲ್ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಈ ಚಿತ್ರವನ್ನು "ಕೆಲವು ದಿನಗಳ ನಂತರ" ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ನವ ನಿರ್ದೇಶಕ ಶ್ರೀನಿ ಹನುಮಂತ ರಾಜು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನು ಈ ಚಿತ್ರ ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆಯಾಧಾರಿತ ಕಥೆಯನ್ನು ಹೊಂದಿದೆ. ಕಾಶಿನಾಥ್ ಎಂಬುವರು ಈ ಚಿತ್ರಕ್ಕೆ ಕಥೆ ಬರೆಯುವುದರ ಜೊತೆಗೆ ನಿರ್ಮಾಣಕ್ಕೂ ಕೈಹಾಕಿದ್ದಾರೆ.

ಇನ್ನು ಈ ಚಿತ್ರದಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ಗೋವಿಂದೇಗೌಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಸದ್ಯ ಪ್ರೀ ಪ್ರೊಡಕ್ಷನ್ ವರ್ಕ್ ನಲ್ಲಿ ಬ್ಯುಸಿ ಇರುವ ಚಿತ್ರತಂಡ ಉಳಿದ ತಾರಬಳಗ ಹಾಗೂ ತಂತ್ರಜ್ಞರನ್ನು ಫೈನಲ್ ಮಾಡಿಕೊಂಡು ನವೆಂಬರ್ ನಲ್ಲಿ ಶೂಟಿಂಗ್ ಶುರು ಮಾಡಲು ಪ್ಲಾನ್ ಮಾಡಿರುವುದಾಗಿ ನಿರ್ದೇಶಕ ಶ್ರೀನಿ ತಿಳಿಸಿದ್ದಾರೆ.

ABOUT THE AUTHOR

...view details