ಭಾರತದಲ್ಲಿ ಮಕ್ಕಳಿಂದ ಹಿಡಿದು ಇಳಿವಯಸ್ಸಿನ ಅಜ್ಜ-ಅಜ್ಜಿಯಂದಿರವರೆಗೂ ಹಾಟ್ ಫೇವರೆಟ್ ಆಗಿರುವ ಟಿಕ್ ಟಾಕ್ ನಿಷೇಧದ ಬಗ್ಗೆ ಕಳೆದ ಕೆಲ ದಿನಗಳಿಂದ ದೇಶದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಕಿರಿಕ್ ಹುಡುಗಿ ಸಂಯುಕ್ತಾ ಹೆಗ್ಡೆ ಟಿಕ್ ಟಾಕ್ ಬ್ಯಾನ್ ಆಗುವುದು ಬೇಡ ಅಂತಿದಾರೆ.
ಟಿಕ್ ಟಾಕ್ ಬ್ಯಾನ್ ಮಾಡೋದು ಬೇಡ ಅಂತಿದಾರೆ ಕಿರಿಕ್ ಹುಡುಗಿ
ಭಾರತದಲ್ಲಿ ಟ್ರೆಂಡ್ ಸೃಷ್ಟಿಸಿರುವ ಚೀನಾ ಮೂಲದ ಟಿಕ್ ಟಾಕ್ ಆ್ಯಪ್‌ಅನ್ನ ಬ್ಯಾನ್ ಮಾಡಬೇಕು ಎಂದು ಹಲವರು ಒತ್ತಾಯಿಸುತ್ತಿದ್ದು, ಕಿರಿಕ್ ಹುಡುಗಿ ಸಂಯುಕ್ತಾ ಹೆಗ್ಡೆ ಬ್ಯಾನ್ ಮಾಡುವುದು ಬೇಡ ಎಂದಿದ್ದಾರೆ.
ಟಿಕ್ಟಾಕ್ ಬ್ಯಾನ್ ಮಾಡೋದು ಬೇಡ ಅಂತಿದ್ದಾರೆ ಕಿರಿಕ್ ಹುಡುಗಿ
ಕನ್ನಡದ ಸುಪ್ರಸಿದ್ಧ ನಿರ್ದೇಶಕರಾದ ಸಂತೋಷ್ ಆನಂದ್ ರಾಮ್, ಪವನ್ ವಡೆಯರ್ ಹಾಗೂ ಎ.ಪಿ.ಅರ್ಜುನ್ ಟಿಕ್ ಟಾಕ್ ಬ್ಯಾನ್ ಮಾಡಬೇಕು ಎಂದು ಅಭಿಯಾನ ಶುರು ಮಾಡಿದ್ದಾರೆ. ಆದರೆ ಸಂಯುಕ್ತಾ ಹೆಗ್ಡೆ ಟಿಕ್ ಟಾಕ್ ಬ್ಯಾನ್ ಆಗುವುದು ಬೇಡ. ಅದು ಒಳ್ಳೆಯ ರೀತಿ ಬದಲಾವಣೆ ಆಗಲಿ ಎಂದಿದ್ದಾರೆ.
ಟಿಕ್ ಟಾಕ್ ಬ್ಯಾನ್ ಮಾಡುವುದರಿಂದ ಜನರ ಮನಸ್ಥಿತಿ ಬದಲಾಗುವುದಿಲ್ಲ. ಬ್ಯಾನ್ ಮಾಡಿದರೆ ಜನರು ಮತ್ತೊಂದು ಮಾರ್ಗವನ್ನ ಕಂಡು ಹಿಡಿಯುತ್ತಾರೆ. ಟಿಕ್ ಟಾಕ್ ಏನೇ ಆದರೂ ನಾನೇನು ಕೇರ್ ಮಾಡಲ್ಲ ಎಂದಿದ್ದಾರೆ.