ಕರ್ನಾಟಕ

karnataka

ETV Bharat / sitara

ಬೆಳ್ಳಿ ತೆರೆಗೆ ಚೆಂದುಳ್ಳಿ ಚೆಲುವೆ ಕರೆತಂದ ಭಟ್ಟರು.. ಈಗಿವಳೇ 'ಪದವಿ ಪೂರ್ವ'ವಿದ್ಯಾರ್ಥಿನಿ!! - sandalwood film industry

ಟೈಟಲ್ ಹೇಳುವ ಹಾಗೆ ಈ ಚಿತ್ರ ವಿಶ್ವವಿದ್ಯಾಲಯ, ಪದವಿ ಪೂರ್ವ ವಿದ್ಯಾರ್ಥಿಗಳ ಸುತ್ತ ಸುತ್ತುವ ಕಥೆಯಾಗಿದೆ‌. ಚಿತ್ರದ ನಾಯಕ ಪೃಥ್ವಿ ಶಾಮನೂರ್​​ಗೂ ಕೂಡ ಇದು ಚೊಚ್ಚಲ ಸಿನಿಮಾ ಆಗಿದೆ..

Actress Anjali Harish will enter sandalwood film industry with Padavi Poorva movie
ನಿರ್ದೇಶಕ ಯೋಗರಾಜ್ ಭಟ್

By

Published : Oct 5, 2020, 4:56 PM IST

ನಿರ್ದೇಶಕ ಯೋಗರಾಜ್ ಭಟ್ ಬ್ಯಾನರ್​ ಅಡಿ ನಿರ್ಮಾಣವಾಗುತ್ತಿರುವ 'ಪದವಿ ಪೂರ್ವ' ಚಿತ್ರಕ್ಕೆ ಅಂಜಲಿ ಹರೀಶ್ ಎಂಬ ಚೆಂದುಳ್ಳಿ ಚೆಲುವೆ ಆಯ್ಕೆಯಾಗಿದ್ದಾಳೆ. ಹರಿಪ್ರಸಾದ್​ ಜಯಣ್ಣ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಯುವ ನಟ ಪೃಥ್ವಿ ಶಾಮನೂರ್ ನಾಯಕ, ನಟನಾಗಿ ಕಾಣಿಸುತ್ತಿದ್ದು, ಅಂಜಲಿ ಹರೀಶ್ ನಾಯಕಿಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ.

2019ರಲ್ಲಿ ಟೈಮ್ಸ್ ಫ್ರೆಶ್ ಫೇಸ್ ಆಗಿ ಫ್ಯಾಷನ್ ಶೋನಲ್ಲಿ ಮಿಂಚಿದ್ದ ಅಂಜಲಿ, 'ಪದವಿ ಪೂರ್ವ' ಸಿನಿಮಾ ಮ‌ೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ.

ಅಂಜಲಿ ಹರೀಶ್

ಮಾಡೆಲ್ ಕಂ ಕಾನೂನು ವಿದ್ಯಾರ್ಥಿನಿಯಾಗಿರುವ ಅಂಜಲಿ ಹರೀಶ್​, ಬಾಲಿವುಡ್​ನ ಹಿರಿಯ ನಟ ಅನುಪಮ್ ಖೇರ್ ಅವರ ಅಭಿನಯ ಶಾಲೆಯಲ್ಲಿ ತರಬೇತಿ ಪಡೆದಿದ್ದಾರೆ. ಬಾಲಿವುಡ್ ಹಾಗೂ ಸ್ಯಾಂಡಲ್​ವುಡ್​ ಸೇರಿ ಮೂರು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಸಹ ಮಾಡಿದ ಅವರಿಗೆ ನಟಿಯಾಗಿ 'ಪದವಿ ಪೂರ್ವ' ಚಿತ್ರ ಮೊದಲ ಸಿನಿಮಾವಾಗಿದೆ.

ಅಂಜಲಿ ಹರೀಶ್

ಟೈಟಲ್ ಹೇಳುವ ಹಾಗೆ ಈ ಚಿತ್ರ ವಿಶ್ವವಿದ್ಯಾಲಯ, ಪದವಿ ಪೂರ್ವ ವಿದ್ಯಾರ್ಥಿಗಳ ಸುತ್ತ ಸುತ್ತುವ ಕಥೆಯಾಗಿದೆ‌. ಚಿತ್ರದ ನಾಯಕ ಪೃಥ್ವಿ ಶಾಮನೂರ್​​ಗೂ ಕೂಡ ಇದು ಚೊಚ್ಚಲ ಸಿನಿಮಾ ಆಗಿದೆ. ಪೃಥ್ವಿ ಜೊತೆಯಾಗಿ ಅಂಜಲಿ ಕಾಣಿಸಿದ್ದಾರೆ‌. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಸಂತೋಷ್ ರೈ ಪತಾಜೆ ಕ್ಯಾಮೆರಾ ವರ್ಕ್ ಇರಲಿದೆ.

ಪದವಿ ಪೂರ್ವ' ಸಿನಿಮಾ ಪೋಸ್ಟರ್​

ಸದ್ಯ ಚಿತ್ರದ ನಾಯಕ ಹಾಗೂ ನಾಯಕಿ ಫೈನಲ್​ ಆಗಿದ್ದು ನಿರ್ದೇಶಕ ಹರಿಪ್ರಸಾದ್ ಜಯಣ್ಣ ಮಲೆನಾಡಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲು ತಯಾರಿ ನಡೆಸಿದ್ದಾರೆ. ಇನ್ನುಳಿದ ಪಾತ್ರ ವರ್ಗದ ಬಗ್ಗೆ ಚಿತ್ರತಂಡ ಸದ್ಯದಲ್ಲೇ ತಿಳಿಸಲಿದೆ. ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಜಂಟಿಯಾಗಿ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.

ಅಂಜಲಿ ಹರೀಶ್

ABOUT THE AUTHOR

...view details