ಮುಂಬೈ:ಡಿಸೆಂಬರ್ 9ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬಾಲಿವುಡ್ನ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ಗೆ ಇದೀಗ ಉಡುಗೊರೆಗಳ ಸುರಿಮಳೆ ಆಗ್ತಿದ್ದು, ಲಭ್ಯವಾಗಿರುವ ಮಾಹಿತಿ ಪ್ರಕಾರ ಮಾಜಿ ಪ್ರಿಯಕರ ಸಲ್ಮಾನ್ ಖಾನ್ ದುಬಾರಿ ಗಿಫ್ಟ್ ನೀಡಿದ್ದಾರೆಂದು ತಿಳಿದು ಬಂದಿದೆ.
ಅನೇಕ ಸಿನಿಮಾಗಳಲ್ಲಿ ನಟನೆ ಮಾಡಿರುವ ಸಲ್ಲು-ಕತ್ರಿನಾ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗದೇ ಹೊರಗುಳಿದಿದ್ದ ಸಲ್ಮಾನ್ ಖಾನ್ ಇದೀಗ ಮೂರು ಕೋಟಿ ರೂಪಾಯಿ ಮೌಲ್ಯದ ರೇಂಜ್ ರೋವರ್ ಕಾರು ಉಡುಗೊರೆಯಾಗಿ ನೀಡಿದ್ದಾರೆಂದು ಹೇಳಲಾಗಿದೆ.
ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಒಂದು ಕಾಲದಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಅನೇಕ ಕಡೆ ಈ ಜೋಡಿ ಸುತ್ತಾಟ ನಡೆಸಿತ್ತು. ಆದರೆ, ಇದನ್ನ ಗುಟ್ಟಾಗಿ ಇಟ್ಟಿದ್ದರು. ಈ ಸಂಬಂಧ ಹೆಚ್ಚು ಕಾಲ ಉಳಿದುಕೊಳ್ಳದ ಕಾರಣ ಬ್ರೇಕ್ ಅಪ್ ಆಗಿತ್ತು. ಇದರ ಹೊರತಾಗಿ ಕೂಡ ಇಬ್ಬರ ನಡುವೆ ಒಳ್ಳೆಯ ಗೆಳೆತನವಿದೆ. ಇದೇ ಕಾರಣಕ್ಕಾಗಿ ಇದೀಗ ದುಬಾರಿ ಮೌಲ್ಯದ ಕಾರು ಗಿಫ್ಟ್ ನೀಡಿದ್ದಾರೆಂದು ವರದಿಯಾಗಿದೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿಕ್ಕಿ-ಕತ್ರಿನಾ ಇದನ್ನೂ ಓದಿರಿ:ಸಾವು ಗೆದ್ದ ದಿವ್ಯಾಂಶಿ... ಕೊಳವೆ ಬಾವಿಗೆ ಬಿದ್ದಿದ್ದ 1 ವರ್ಷದ ಬಾಲಕಿಯ ರಕ್ಷಣೆ
ಇದರ ಜೊತೆಗೆ ನಟ ರಣಬೀರ್ ಕಪೂರ್,ಆಲಿಯಾ ಭಟ್ ಸೇರಿದಂತೆ ಅನೇಕರು ದುಬಾರಿ ಮೌಲ್ಯದ ಗಿಫ್ಟ್ ಉಡುಗೊರೆಯಾಗಿ ನೀಡಿದ್ದಾರೆಂದು ಹೇಳಲಾಗುತ್ತಿದೆ. ರಾಜಸ್ಥಾನದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿರುವ ಈ ಜೋಡಿ ಇದೀಗ ಡಿಸೆಂಬರ್ 20ರಂದು ಮುಂಬೈನಲ್ಲಿ ಕೆಲ ಸೆಲೆಬ್ರಿಟಿಗಳಿಗೆ ಔತಣಕೂಟ ಏರ್ಪಡಿಸಿದೆ.