ಸಲಗ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಸಖತ್ ಸೌಂಡ್ ಮಾಡುತ್ತಿವೆ. ಈಗಾಗಲೇ ಚಿತ್ರದ ಇತರೆ ಪಾತ್ರಗಳು ರಿವೀಲ್ ಆಗಿವೆ. ಆದರೆ, ನಾಯಕನ ಪಾತ್ರ ಇನ್ನೂ ರಿವೀಲ್ ಮಾಡದ ಚಿತ್ರತಂಡ ತುಂಬಾ ಕ್ಯೂರಿಯಾಸಿಟಿ ಮೂಡಿಸಿದೆ.
ಸಲಗ ಚಿತ್ರದ ಮಾತಿನ ಭಾಗದ ಶೂಟಿಂಗ್ ಈಗಾಗಲೇ ಶೇ. 65ರಷ್ಟು ಕಂಪ್ಲೀಟ್ ಆಗಿದೆ. ಫೈಟ್ ಹಾಗೂ ಸಾಂಗ್ಗಳ ಶೂಟಿಂಗ್ ಮುಗಿದ ನಂತರ ಒಂದು ಫ್ಲ್ಯಾಶ್ ಬ್ಯಾಕ್ ಸೀನ್ ಚಿತ್ರೀಕರಣ ನಡೆಯಲಿದೆ. ಈ ವರ್ಷದಲ್ಲಿ ಸಲಗ ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ. ಶೀಘ್ರದಲ್ಲೇ ಚಿತ್ರದಲ್ಲಿಯ ತಮ್ಮ ಲುಕ್ನ್ನು ರಿವೀಲ್ ಮಾಡುವುದಾಗಿ ನಟ-ನಿರ್ದೇಶಕ ವಿಜಯ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದುನಿಯಾ ವಿಜಯ್ ಮಾಧ್ಯಮಗೋಷ್ಠಿ ಅಲ್ಲದೆ, ಚಿತ್ರದಲ್ಲಿ ಧನಂಜಯ ಅವರ ಪಾತ್ರಕ್ಕೆ ತಮ್ಮ ಮಗ ಸಾಮ್ರಾಟ್ ಹೆಸರಿಟ್ಟಿರುವುದರ ಹಿಂದಿನ ಕಾರಣ ರಿವೀಲ್ ಮಾಡಿದ ಕರಿಚಿರತೆ, ನನ್ನ ಮಗನನ್ನು ಐಪಿಎಸ್ ಅಧಿಕಾರಿಯನ್ನಾಗಿ ಮಾಡಬೇಕೆಂಬ ಗುರಿಯಿದೆ ಎಂದರು. ಜೊತೆಗೆ ಒಳ್ಳೆಯ ನಟನನ್ನಾಗಿಸುವ ಆಸೆ ಕೂಡ ಇದೆ. ದಕ್ಷ ಐಪಿಎಸ್ ಅಧಿಕಾರಿಗಳಾದ ರವಿ ಡಿ. ಚೆನ್ನಣ್ಣನವರ್ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಅಣ್ಣಮಲೈ ಅವರನ್ನು ಭೇಟಿಯಾಗಿ ಅವರಿಂದ ಸ್ಫೂರ್ತಿ ಪಡೆದು ಈ ಚಿತ್ರವನ್ನು ಮಾಡ್ತಿದ್ದೇನೆ ಎಂದರು.
ಇನ್ನು ಸಲಗ ಚಿತ್ರವನ್ನು ದಕ್ಷ ಪೊಲೀಸ್ ಅಧಿಕಾರಿಗಳಿಗೆ ಅರ್ಪಿಸುವುದಾಗಿ ಹೇಳಿದ್ರು. ಪ್ರಸ್ತುತ ಸಮಾಜದಲ್ಲಿ ಯುವಕರು ಪೆನ್ ಹಿಡಿಯುವ ಬದಲು ಬೇರೇನೋ ಹಿಡಿಯುವುದನ್ನು ತಪ್ಪಿಸುವುದು ನಮ್ಮ ಚಿತ್ರದ ಉದ್ದೇಶ ಎಂದು ವಿಜಯ್ ಹೇಳಿದ್ರು.