ಕರ್ನಾಟಕ

karnataka

ETV Bharat / sitara

'ಪೊಗರು'ಹೆಚ್ಚಿಸಿದ wwe ಆಟಗಾರ ಮೋರ್ಗನ್ ಆಸ್ಟೆ.. - ಆ್ಯಕ್ಷನ್ ಪ್ರಿನ್ಸ್ ಧೃವ ಸರ್ಜಾ

ಭರ್ಜರಿ ಹುಡುಗನ ಪೊಗರು ಚಿತ್ರದ ಶೂಟಿಂಗ್ ಕೊನೆಯ ಹಂತಕ್ಕೆ ಬಂದಿದೆ. ಈ ಸಿನಿಮಾ ಕ್ಲೈಮ್ಯಾಕ್ಸ್ ದೃಶ್ಯದ ಶೂಟಿಂಗ್ ಇಂದು ನಡೆಯಲಿದೆ.

actor dhruva sarja

By

Published : Aug 24, 2019, 12:44 PM IST

ಈಗಾಗಲೇ ವಿಭಿನ್ನ ಲುಕ್​ಗಳ ಮೂಲಕ ಅಭಿಮಾನಿಗಳಿಗೆ ಇಂಪ್ರೆಸ್ ಮಾಡಿರುವ ಆ್ಯಕ್ಷನ್ ಪ್ರಿನ್ಸ್ ಧೃವ ಸರ್ಜಾ, ಈಗ ದೊಡ್ಡ ಸರ್​ಪ್ರೈಸ್​ ನೀಡಿದ್ದಾರೆ. ಚಿತ್ರದ ಕೊನೆಯ ಹಂತದ ಶೂಟಿಂಗ್ ಪರಿಣಾಮಕಾರಿಯಾಗಿ ಮೂಡಿ ಬರಲು ಶ್ರಮಿಸುತ್ತಿರುವ ಚಿತ್ರತಂಡ, ಇದಕ್ಕಾಗಿ ಹಾಲಿವುಡ್ ದೈತ್ಯ ಮನುಷ್ಯನನ್ನು ಕರೆತಂದಿದೆ.

ಚಿತ್ರದ ಕ್ಲೈಮ್ಯಾಕ್ಸ್​​ಗೆ ಭರ್ಜರಿ ವರ್ಕೌಟ್ ಮಾಡ್ತಿರೋ ಬಹದ್ದೂರ್ ಹುಡುಗ ಧೃವ ಅವರಿಗೆ ಮಾಜಿ wwe ಆಟಗಾರ ಮೋರ್ಗನ್ ಆಸ್ಟೆ ತರಬೇತು ನೀಡಿದ್ದಾರೆ. ಬರೋಬ್ಬರಿ 49 ದಿನಗಳ ಕಾಲ ಹ್ಯಾಟ್ರಿಕ್ ಪ್ರಿನ್ಸ್​ ಸರ್ಜಾಗೆ ಟ್ರೈನಪ್​ ಮಾಡಿದ್ದಾರೆ ಮೋರ್ಗನ್​.

ಮೋರ್ಗನ್ ಆಸ್ಟೆ ಜತೆ ಧೃವ ಸರ್ಜಾ..

ಸದ್ಯ ಹೈದರಾಬಾದ್​ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿದ್ದು, ಮೋರ್ಗನ್​ ಜತೆ ಧ್ರುವ ಸರ್ಜಾ ಖುಷಿ ಹಂಚಿಕೊಂಡಿದ್ದಾರೆ. ಮೋರ್ಗನ್ ಬಾಯಲ್ಲಿ ಜೈಶ್ರೀರಾಮ್, ಜೈ ಆಂಜನೇಯ ಎಂದು ಹೇಳಿಸಿದ್ದಾರೆ. ಅಲ್ಲದೆ ಪೊಗರು ಟೀಂನಿಂದ ಇನ್ನಷ್ಟು ಸರ್​ಪ್ರೈಸ್​ ಸುದ್ದಿ ಕೊಡ್ತೀನಿ ಎಂದು ಹೇಳಿದ್ದಾರೆ ಪೊಗರಿನ ಹುಡುಗ ಧೃವ.

ABOUT THE AUTHOR

...view details