ಅರಣ್ಯ ಇಲಾಖೆ ಸಿಬ್ಬಂದಿ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಟ ಚಿಕ್ಕಣ್ಣ ಕೈ ಜೋಡಿಸಿದ್ದಾರೆ. ದರ್ಶನ್ ಅವರು ಕ್ಲಿಕ್ಕಿಸಿದ್ದ ಫೋಟೋ ಖರೀದಿಸಿ ಆರ್ಥಿಕವಾಗಿ ನೆರವಾಗಿದ್ದಾರೆ.
ಹಾಸ್ಯ ನಟ ಚಿಕ್ಕಣ್ಣನಿಗೆ ದರ್ಶನ್ ಕೃತಜ್ಞತೆ ಹೇಳಿದ್ಯಾಕೆ ? - ಸ್ಟಾರ್ ದರ್ಶನ್
ಅರಣ್ಯ ಇಲಾಖೆಯ ರಾಯಬಾರಿಯಾಗಿರುವ ದಚ್ಚು, ಅಲ್ಲಿಯ ಸಿಬ್ಬಂದಿಗೆ ನೆರವಾಗುವ ನಿಟ್ಟಿನಲ್ಲಿ ಫಂಡ್ ಕಲೆಕ್ಟ್ ಮಾಡುತ್ತಿದ್ದಾರೆ. ತಾವು ಸೆರೆ ಹಿಡಿದಿರುವ ವನ್ಯಜೀವಿಗಳ ಫೋಟೋಗಳ ಪ್ರದರ್ಶನ ಹಾಗೂ ಮಾರಾಟ ಮಾಡುತ್ತಿದ್ದಾರೆ.
ಅರಣ್ಯ ಇಲಾಖೆಯ ರಾಯಬಾರಿಯಾಗಿರುವ ದಚ್ಚು, ಅಲ್ಲಿಯ ಸಿಬ್ಬಂದಿಗೆ ನೆರವಾಗುವ ನಿಟ್ಟಿನಲ್ಲಿ ಫಂಡ್ ಕಲೆಕ್ಟ್ ಮಾಡುತ್ತಿದ್ದಾರೆ. ತಾವು ಸೆರೆ ಹಿಡಿದಿರುವ ವನ್ಯಜೀವಿಗಳ ಫೋಟೋಗಳ ಪ್ರದರ್ಶನ ಹಾಗೂ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬಂದ ಹಣವನ್ನು ಅರಣ್ಯ ಇಲಾಖೆ ಸಿಬ್ಬಂದಿಯ ಕಲ್ಯಾಣಕ್ಕೆ ವಿನಿಯೋಜಿಸುತ್ತಿದ್ದಾರೆ.
ಈಗಾಗಲೇ ಚಂದನವನದ ನಟರು, ದರ್ಶನ್ ಅವರ ಆಪ್ತರು ಈ ಛಾಯಾಚಿತ್ರಗಳನ್ನು ಖರೀದಿಸಿ, ಪರೋಕ್ಷವಾಗಿ ಕಲ್ಯಾಣ ನಿಧಿಗೆ ಹಣ ಸಂದಾಯ ಮಾಡಿದ್ದಾರೆ. ಇದೀಗ ಹಾಸ್ಯ ನಟ ಚಿಕ್ಕಣ್ಣ ಅವರು 1 ಲಕ್ಷ ರೂ. ನೀಡಿ ಆನೆಯ ಫೋಟೋ ಪಡೆದಿದ್ದಾರೆ. ಚಿಕ್ಕಣ್ಣನ ಈ ಸಾಮಾಜಿಕ ಕಳಕಳಿಗೆ ಸ್ಯಾಂಡಲ್ವುಡ್ನ ಯಜಮಾನ ಶ್ಲಾಘಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ.