ಭುವನೇಶ್ವರ: ಹಿರಿಯ ಓಲಿವುಡ್ ನಟ ರಬಿ ಮಿಶ್ರಾ ಭುವನೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ.
ಓಲಿವುಡ್ ಹಿರಿಯ ನಟ ರಬಿ ಮಿಶ್ರಾ ಹೃದಯಾಘಾತದಿಂದ ನಿಧನ - ಓಲಿವುಡ್ ಸಿನಿಮಾ ಇಂಡಸ್ಟ್ರೀಸ್
ಓಲಿವುಡ್ ನಟ ರಬಿ ಮಿಶ್ರಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರ ಸಾವಿಗೆ ಒಡಿಯಾ ಚಿತ್ರರಂಗ ಸಂತಾಪ ಸೂಚಿಸಿದೆ.
ಹಿರಿಯ ನಟ ರಬಿ ಮಿಶ್ರಾ
'ಹೇ ಪ್ರಭು' ಎಂಬ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದ ಸಂದರ್ಭದಲ್ಲಿ ರಬಿ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಈ ವೇಳೆ ಅವರನ್ನು ಭುವನೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಹೃದಯಾಘಾತ ಸಂಭವಿಸಿ ಅವರು ಸಾವನ್ನಪ್ಪಿದ್ದಾರೆ.
ಗೋಪಾಲ್ ರಹಸ್ಯ ಸೇರಿದಂತೆ ಅನೇಕ ಒಡಿಯಾ ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನು ಇವರ ಸಾವಿಗೆ ಒಡಿಯಾ ಚಿತ್ರರಂಗ ಸಂತಾಪ ಸೂಚಿಸಿದೆ.